ಶಿವಮೊಗ್ಗ :ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ, ಆಗ ಭದ್ರಾವತಿಯಲ್ಲಿ ಟಿಪ್ಪು ಸುಲ್ತಾನ್ ಅವರ 22 ಅಡಿ ಎತ್ತರದ ಮೂರ್ತಿ ಸ್ಥಾಪಿಸುವುದಾಗಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷ ಸಿಎಂ ಖಾದರ್ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಕಾಂಗ್ರೆಸ್ ಬಂದರೆ 22 ಅಡಿ ಟಿಪ್ಪು ಪುತ್ಥಳಿ ನಿರ್ಮಾಣ : ಸಿಎಂ ಖಾದರ್ ಹೇಳಿದ್ದರೆನ್ನಲಾದ ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಭದ್ರಾವತಿಯಲ್ಲಿ ಟಿಪ್ಪು ಸುಲ್ತಾನನ 22 ಅಡಿ ಪ್ರತಿಮೆ ಸ್ಥಾಪಿಸುವುದಾಗಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷ ಸಿಎಂ ಖಾದರ್ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಕಳೆದ ನ.21ರಂದು ಭದ್ರಾವತಿ ಪಟ್ಟಣದ ಹೊಳೆಹೊನ್ನೂರು ರಸ್ತೆಯ ದುರ್ಗಿಗುಡಿ ವೃತ್ತದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭ ಟಿಪ್ಪು ಸುಲ್ತಾನ್ ರವರ ಹೋರಾಟದ ಕುರಿತು ಮಾತನಾಡುತ್ತಾ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸಂಗಮೇಶ್ ರನ್ನು ಗೆಲ್ಲಿಸೋಣ. ಆಗ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಂತರ ಇದೇ ವೃತ್ತದಲ್ಲಿ ಟಿಪ್ಪು ಸುಲ್ತಾನರ 22 ಅಡಿ ಎತ್ತರದ ಪುತ್ಥಳಿಯನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ :'ಟಿಪ್ಪು ನಿಜ ಕನಸುಗಳು' ನಾಟಕ ವಿರುದ್ಧ ಪಿಐಎಲ್ ಹಾಕಲಾಗುವುದು: ಶಾಸಕ ತನ್ವಿರ್ ಸೇಠ್