ಶಿವಮೊಗ್ಗ: ಕೋವಿಡ್-19 ನಿಂದ ಮೃತರಾದವರ ಶವ ಸಂಸ್ಕಾರವನ್ನು ತೀರ್ಥಹಳ್ಳಿಯ ಸಮಾನ ಮನಸ್ಕರ ತಂಡ ನಡೆಸಿಕೊಂಡು ಬಂದು ಜನ ಮೆಚ್ಚುಗೆಯನ್ನು ಗಳಿಸಿದೆ.
ಕೋವಿಡ್ಗೆ ಬಲಿಯಾದವರ ಶವಸಂಸ್ಕಾರ; ತೀರ್ಥಹಳ್ಳಿಯ ಸಮಾನ ಮನಸ್ಕರ ತಂಡಕ್ಕೆ ಭೇಷ್ - ತೀರ್ಥಹಳ್ಳಿಯ ಸಮಾನ ಮನಸ್ಕರ ತಂಡದಿಂದ ಅಂತ್ಯಸಂಸ್ಕಾರ
ಕೋವಿಡ್ನಿಂದ ಮೃತಪಟ್ಟವರ ಶವಸಂಸ್ಕಾರ ಮಾಡಲು ಮೃತರ ಆಪ್ತವಲಯವೇ ಹಿಂದೇಟು ಹಾಕುತ್ತಿರುವ ಸನ್ನಿವೇಶದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಾಗರಿಕರ ತಂಡವೊಂದು ಕೋವಿಡ್ನಿಂದ ಮೃತರ ಶವಸಂಸ್ಕಾರ ಕಾರ್ಯ ನೆರವೇರಿಸುತ್ತಿದೆ.
ಕೋವಿಡ್-19 ನಿಂದ ಮೃತರಾದವರ ಬಳಿ ಮನೆಯವರು ಸೇರಿದಂತೆ, ಸಂಬಂಧಿಕರು ಹತ್ತಿರ ಬರುವುದಕ್ಕೆ ಹೆದರುವಾಗ ತೀರ್ಥಹಳ್ಳಿಯ ರಾಘವೇಂದ್ರ ಸೂಪ್ಪುಗುಡ್ಡೆರವರು ಕೋವಿಡ್ ನಿಂದ ಮೃತರಾದವರಿಗೂ ಸಹ ಒಂದು ಮುಕ್ತಿಯನ್ನು ನೀಡಬೇಕು ಎಂಬ ಉದ್ದೇಶದಿಂದ 10 ಜನ ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಶವ ಸಂಸ್ಕಾರ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಸರ್ಕಾರ, ಕೋವಿಡ್ನಿಂದ ಮೃತರಾದವರ ಶವವನ್ನು ಸಂಬಂಧಿಗಳಿಗೆ ನೀಡುತ್ತಿರುವ ಕಾರಣ ಸದ್ಯ ಈಗ ಎರಡು ಶವಗಳನ್ನು ಧಾರ್ಮಿಕವಾಗಿ ಅಂತ್ಯಸಂಸ್ಕಾರ ನಡೆಸುತ್ತಿದೆ. ಶವ ಸಂಸ್ಕಾರ ನಡೆಸುವಾಗ ಕಡ್ಡಾಯವಾಗಿ ಪಿಪಿಇ ಕಿಟ್ ಹಾಕಿಕೊಳ್ಳಲಾಗುತ್ತೆ. ಕೋವಿಡ್ನಿಂದ ಮೃತರಾದವರಿಗೆ ಯಾರು ಬೇಕಾದರೂ ಭಯಪಡದೇ ಅಂತ್ಯಸಂಸ್ಕಾರ ನಡೆಸಬಹುದು ಎಂಬ ಸಂದೇಶ ಸಾರಲು ಈ ಕೆಲಸ ಮಾಡಲಾಗುತ್ತಿದೆ.