ಶಿವಮೊಗ್ಗ:ವೈನ್ಶಾಪ್, ಬಾರ್ ರೆಸ್ಟೋರೆಂಟ್ಗಳಿಗೆ ದೇವರ ಹೆಸರುಗಳನ್ನು ಇಡಬೇಡಿ, ದೇವರು ಹೆಸರುಗಳಿದ್ದರೆ ಅದನ್ನು ಬದಲಾಯಿಸಿ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವೈನ್,ಬಾರ್ ಮಾಲೀಕರಲ್ಲಿ ವಿನಂತಿ ಮಾಡಿದರು.
ಬಾರ್,ವೈನ್ ಶಾಪ್ಗಳಿರುವ ದೇವರು ಹೆಸರುಗಳನ್ನು ಬದಲಾಯಿಸಿ: ಕೋಟಾ ಶ್ರೀನಿವಾಸ ಪೂಜಾರಿ ವಿನಂತಿ - ಕೋಟಾ ಶ್ರೀನಿವಾಸ ಪೂಜಾರಿ ಲೆಟೆಸ್ಟ್ ನ್ಯೂಸ್
ವೈನ್ಶಾಪ್, ಬಾರ್ ರೆಸ್ಟೋರೆಂಟ್ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಬದಲಾಯಿಸಿ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವೈನ್,ಬಾರ್ ಮಾಲೀಕರಲ್ಲಿ ವಿನಂತಿ ಮಾಡಿದರು.

ಕೋಟಾ ಶ್ರೀನಿವಾಸ ಪೂಜಾರಿ
ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ನಗರದ ಊರುಗಡೂರು ಗ್ರಾಮದ ಮಲ್ಲೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ತಾಲೂಕು ಅರ್ಚಕರ ಹಾಗೂ ದೇವಾಲಯಗಳ ಸಮಿತಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವರು, ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ದೇವರುಗಳ ಹೆಸರನ್ನು ಮದ್ಯದಂಗಡಿಗಳಿಗೆ ಇಟ್ಟಿರುವುದು ಸರಿಯಲ್ಲ. ಇವುಗಳ ಹೆಸರು ಬದಲಾವಣೆ ಮಾಡುವ ಕುರಿತು ಇಲಾಖೆಗೆ ಒಂದು ಟಿಪ್ಪಣಿ ಬರೆದಿದ್ದೆ. ಮದ್ಯದಂಗಡಿಗಳಿಗೆ ಇಡಲಾದ ದೇವರ ಹೆಸರನ್ನು ತೆಗೆಯಲು ಅಧಿಕಾರಿಗಳಿಗೆ ವರದಿ ಸಲ್ಲಿಸಲು ತಿಳಿಸಿದ್ದೇನೆ. ಈ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದರು.
ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.