ಶಿವಮೊಗ್ಗ:ಮೊಬೈಲ್ ಕದಿಯಲು ಬಂದಿದ್ದ ಖದೀಮರು ಮೊಬೈಲ್ ನೀಡಲಿಲ್ಲ ಎಂದು ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ನಗರದ ಬಿ.ಹೆಚ್.ರಸ್ತೆಯ ರಾಯಲ್ ಆರ್ಕಿಡ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಅಶೋಕ್ ಪ್ರಭು ಎಂಬುವರ ಮೊಬೈಲ್ ಕದಿಯಲು ಬಂದಿದ್ದಾರೆ.
ಈ ವೇಳೆ ಮೊಬೈಲ್ ನೀಡುವುದಕ್ಕೆ ಅಶೋಕ ಪ್ರಭು ವಿರೋಧ ಮಾಡಿದ್ದಕ್ಕೆ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಎರಡು ಬೈಕ್ನಲ್ಲಿ ಬಂದ ನಾಲ್ವರು ಚಾಕು ಇರಿತವಾದ ತಕ್ಷಣ ಪರಾರಿಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.