ಕರ್ನಾಟಕ

karnataka

ETV Bharat / state

ಅಭಿಮಾನಿಗೆ ಶಿಸ್ತು ಪಾಲಿಸುವಂತೆ ಡಿಕೆಶಿ ಒಂದೇಟು ಕೊಟ್ಟಿದ್ದಾರಷ್ಟೇ: ಡಿ.ದೇವೇಂದ್ರಪ್ಪ ಸಮಜಾಯಿಷಿ - ಡಿ.ದೇವೇಂದ್ರಪ್ಪ

ಡಿಕೆಶಿ ತಮ್ಮ ಅಭಿಮಾನಿ ಮೇಲೆ ಕೈ ಮಾಡಿದ್ದನ್ನು ಅಪರಾಧ ಎಂದು ಬಿಂಬಿಸುವ ಅಗತ್ಯವಿಲ್ಲ. ಅವರು ಶಿಸ್ತು ಪಾಲಿಸುವಂತೆ ಪ್ರೀತಿಯಿಂದ ಬುದ್ಧಿ ಹೇಳಿದ್ದಾರಷ್ಟೇ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ದೇವೇಂದ್ರಪ್ಪ ಸಮಜಾಯಿಷಿ ನೀಡಿದ್ದಾರೆ.

ಡಿ.ದೇವೇಂದ್ರಪ್ಪ
ಡಿ.ದೇವೇಂದ್ರಪ್ಪ

By

Published : Jul 13, 2021, 7:58 AM IST

ಶಿವಮೊಗ್ಗ:ತಮ್ಮ ಅಭಿಮಾನಿ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈ ಮಾಡಿದ್ದನ್ನೇ ಮಹಾನ್ ಪ್ರಕರಣ ಎಂದು ಬಿಂಬಿಸುವ ಬಿಜೆಪಿ ರಾಜ್ಯಾಧ್ಯಕ್ಷರು ಮೊದಲು ತಮ್ಮ ಪಕ್ಷದಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ದೇವೇಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕರ್ತ ಶಿಸ್ತು ಪಾಲಿಸುವಂತೆ ಡಿಕೆಶಿ ಒಂದೇಟು ಕೊಟ್ಟಿದ್ದಾರಷ್ಟೇ:ಡಿ.ದೇವೇಂದ್ರಪ್ಪ

ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಹೆಗಲ ಮೇಲೆ ಕೈ ಹಾಕಿದ ಅಭಿಮಾನಿಗೆ ಶಿಸ್ತು ಪಾಲಿಸುವಂತೆ ಪ್ರೀತಿಯಿಂದ ಒಂದೇಟು ಹಾಕಿದ್ದನ್ನೇ ಮಹಾಪರಾಧ ಎಂದು ಬಿಂಬಿಸುವುದು ಸರಿಯಲ್ಲ. ಈ ಹಿಂದೆ ಬಿಜೆಪಿ ನಾಯಕರು ಕೂಡ ಕಾರ್ಯಕರ್ತರ ಮೇಲೆ ಕೈ ಮಾಡಿರುವ ಘಟನೆ ನಡೆದಿದೆ. ಇದು ನಮ್ಮ ಪಕ್ಷದ ಆಂತರಿಕ ವಿಚಾರ. ಇದರಲ್ಲಿ ಬಿಜೆಪಿಯವರು ಮೂಗು ತೂರಿಸುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ:ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ?.. ಡಿಕೆಶಿ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್

ಇದೇ ರೀತಿ ಬಿಜೆಪಿ ನಾಯಕರ ವರ್ತನೆ ಮಿತಿ ಮೀರಿದರೆ ಪಕ್ಷದ ವತಿಯಿಂದ ಮುಖ್ಯಮಂತ್ರಿಗಳ ಹಾಗೂ ಸಚಿವರ ಕಾರ್ಯಕ್ರಮಗಳಲ್ಲಿ ಮುತ್ತಿಗೆ ಹಾಕಲಾಗುವುದು. ಹಾಗಾಗಿ ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ತೇಜೋವಧೆ ಮಾಡುವ ಹಾಗೂ ನಿಂದಿಸುವ ಕ್ರಮವನ್ನು ಬಿಜೆಪಿ ಕಾರ್ಯಕರ್ತರು, ನಾಯಕರು ಬಿಡಬೇಕು ಎಂದು ಎಚ್ಚರಿಸಿದರು.

ABOUT THE AUTHOR

...view details