ಶಿವಮೊಗ್ಗ: ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಬೆಂಕಿ ಹಿಡಿದ ಪರಿಣಾಮ ಮನೆಯ ಅಡುಗೆ ಕೋಣೆಯಲ್ಲಿದ್ದ ವಸ್ತುಗಳು ಸುಟ್ಟು ಹೋದ ಘಟನೆ ಜಿಲ್ಲೆಯ ಶಾಂತಿಪುರ ಎಂಬಲ್ಲಿ ನಡೆದಿದೆ. ಶಾಂತಿಪುರದ ನಿವಾಸಿ ಶ್ರೀಧರ್ ಎಂಬುವರ ಮನೆಯಲ್ಲಿ ಇಂದು ಬೆಳ್ಳಗ್ಗೆ ತಿಂಡಿ ಮಾಡುವಾಗ ಗ್ಯಾಸ್ ಸೋರಿಕೆಯಾಗಿದೆ.
ಗ್ಯಾಸ್ ಸಿಲಿಂಡರ್ ಸೋರಿಕೆ ಹೊತ್ತಿ ಉರಿದ ಅಡುಗೆ ಮನೆ: ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ - kitchen burnt due to gas leakage in shivamogga
ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಬೆಂಕಿ ಹಿಡಿದ ಪರಿಣಾಮ ಮನೆಯ ಅಡುಗೆ ಕೋಣೆಯಲ್ಲಿದ್ದ ವಸ್ತುಗಳು ಸುಟ್ಟು ಹೋದ ಘಟನೆ ಶಿವಮೊಗ್ಗ ಜಿಲ್ಲೆಯ ಶಾಂತಿಪುರ ಎಂಬಲ್ಲಿ ನಡೆದಿದೆ.
ಗ್ಯಾಸ್ ಸಿಲಿಂಡರ್ ಸೋರಿಕೆ ಹೊತ್ತಿ ಉರಿದ ಅಡುಗೆ ಮನೆ: ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ.
ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಡುಗೆ ಮಾಡುತ್ತಿರುವವರು ಓಡಿ ಹೊರಗೆ ಬಂದಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅಡುಗೆ ಮನೆ ವಸ್ತುಗಳು ಸುಟ್ಟು ಕರಕಲಾಗಿವೆ. ತಕ್ಷಣ ಗ್ರಾಮಸ್ಥರು ಸಿಲಿಂಡರ್ಗೆ ಗೋಣಿಚೀಲ ಹಾಕಿ ಬೆಂಕಿ ಹೆಚ್ಚು ಹರಡುವುದನ್ನು ತಡೆದಿದ್ದು, ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಓದಿ :ಮದುವೆಗೆ ನಿರಾಕರಿಸಿದ ಲವರ್ ವಿರುದ್ಧ ಕಟ್ಟಡ ಏರಿ ಕುಳಿತ 17ರ ಹುಡುಗಿ!
TAGGED:
shivamogga gas leakage