ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ಗುಂಪು ಸೇರಲು ಬಿಡದ ಪೊಲೀಸರು: ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಆಕ್ರೋಶ - Kimmane Ratnakar
ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷ ಸದಸ್ಯರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಗುಂಪು ಸೇರಲು ಬಿಡದ ಪೊಲೀಸರ ವಿರುದ್ಧ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಕಾಂಗ್ರೆಸ್ ಕಾರ್ಯಕರ್ತರಿಗೆ ಗುಂಪು ಸೇರಲು ಬಿಡದ ಪೊಲೀಸರು: ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಆಕ್ರೋಶ Kimmane Ratnakar Outrage In Theerthahalli](https://etvbharatimages.akamaized.net/etvbharat/prod-images/768-512-11603139-thumbnail-3x2-vish.jpg)
ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಆಕ್ರೋಶ
ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಆಕ್ರೋಶ
ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಬಂದಾಗ ಪೊಲೀಸರು ಕೊರೊನಾ ಕರ್ಪ್ಯೂ ಇದೆ. ಗುಂಪು ಸೇರುವಂತಿಲ್ಲ ಎಂದು ಹೇಳುತ್ತಿದ್ದಂತೆಯೇ ಕಿಮ್ಮನೆ ರತ್ನಾಕರ್ ಪೊಲೀಸರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಚುನಾವಣಾ ನೀತಿ ಸಂಹಿತೆ ಇರುವಾಗ ನಿನ್ನೆ ಶಾಸಕರು ಹೇಗೆ ಸಭೆ ನಡೆಸಿದರು. ಇದಕ್ಕೆ ನೀವು ಹೇಗೆ ಅನುಮತಿ ನೀಡಿದ್ರಿ. ನೀವು ಆಡಳಿತ ಪಕ್ಷದವರ ಪರವಾಗಿ ಇರದೇ ಜನ ಸಾಮಾನ್ಯರ ಪರವಾಗಿ ಇರಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.