ಕರ್ನಾಟಕ

karnataka

ETV Bharat / state

ತೈಲ ಬೆಲೆ ಏರಿಕೆ: ಸೈಕಲ್ ಜಾಥಾ ನಡೆಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಆಕ್ರೋಶ! - ಸೈಕಲ್​​ ಜಾಥಾ ನಡೆಸಿದ ರತ್ನಾಕರ್​

ಪ್ರತಿದಿನ ತೈಲ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿರುವ ಮಾಜಿ ಸಚಿವ ಕಿಮನೆ ರತ್ನಾಕರ್​, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

kimmane rathnakar cycle protest
kimmane rathnakar cycle protest

By

Published : Jul 7, 2020, 1:51 AM IST

ಶಿವಮೊಗ್ಗ: ಕೇಂದ್ರ ಸರ್ಕಾರ ಪ್ರತಿದಿನ ತೈಲ ಬೆಲೆ ಏರಿಕೆ‌ ಮಾಡುತ್ತಿರುವುದನ್ನು ಖಂಡಿಸಿ, ತೀರ್ಥಹಳ್ಳಿ ಬ್ಲಾಕ್​ ಕಾಂಗ್ರೆಸ್ ಸೈಕಲ್ ಜಾಥಾ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು.

ಕೇಂದ್ರ ಸರ್ಕಾರದ‌ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸೈಕಲ್​ ಜಾಥಾ ನಡೆಸಲಾಯಿತು. ತೀರ್ಥಹಳ್ಳಿಯ ಬಾಳೆಬೈಲಿನಿಂದ ಪ್ರಾರಂಭವಾದ ಸೈಕಲ್​ ಜಾಥಾ ಆಗುಂಬೆ ರಸ್ತೆಯ ಮೂಲಕ ತೀರ್ಥಹಳ್ಳಿ ತಾಲೂಕು ಕಚೇರಿ ತಲುಪಿತು.

ಸುರಿಯುವ ಮಳೆಯನ್ನು ಲೆಕ್ಕಿಸದೆ ಕಾಂಗ್ರೆಸ್ ಕಾರ್ಯಕರ್ತರು ಜಾಥಾದಲ್ಲಿ ಭಾಗಿಯಾದರು. ಇದರಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಕೂಡ ಭಾಗಿಯಾಗಿದ್ದರು. ಕೊರೊನಾದಿಂದ ವಿಶ್ವವೇ ತತ್ತರಿಸಿ ಹೋಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ‌ ಕಚ್ಚಾ ತೈಲ ಬೆಲೆ ಕುಸಿತ ಕಂಡಿದೆ. ಆದರೂ‌ ನಮ್ಮಲ್ಲಿ‌ ಡಿಸೇಲ್​-ಪೆಟ್ರೋಲ್​ಗೆ ಪೈಪೋಟಿ ನೀಡುತ್ತಾ ಸಾಗಿದೆ. ತಕ್ಷಣವೇ ತೈಲ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರದ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದರು. ಈ ವೇಳೆ ಜಿ.ಪಂ ಸದಸ್ಯ ಕಲಗೋಡು ರತ್ನಾಕರ್ ಸೇರಿ ಇತರರು ಹಾಜರಿದ್ದರು.

ABOUT THE AUTHOR

...view details