ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಹಳೆ ವೈಷಮ್ಯ : ಸಾಗರದಲ್ಲಿ ಯುವಕನ ಬರ್ಬರ ಕೊಲೆ - shiivmogga news
ಸಜೀಲ್ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಜೀಲ್ ಕಳೆದ ವರ್ಷ ಬೇರೆ ದೇಶದಿಂದ ಭಾರತಕ್ಕೆ ಬಂದು ಇಲ್ಲಿ ನೆಲೆಸಿದ್ದ. ಜೀವನಕ್ಕಾಗಿ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ.
ಸಾಗರದಲ್ಲಿ ಯುವಕನ ಬರ್ಬರ ಕೊಲೆ
ಸಾಗರದ ಹೊರ ವಲಯದ ನಾಗಪ್ಪ ಲೇಔಟ್ನ ಬಳಿ ಸಜೀಲ್ (24) ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಜೀಲ್ ಕಳೆದ ವರ್ಷ ಬೇರೆ ದೇಶದಿಂದ ಭಾರತಕ್ಕೆ ಬಂದು ಇಲ್ಲಿ ನೆಲೆಸಿದ್ದ. ಜೀವನಕ್ಕೆ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ.
ಕೀಡಿಗೇಡಿಗಳು ಮಾರಕಾಸ್ತ್ರಗಳಿಂದ ಸಜೀಲ್ನ ತಲೆಗೆ ಹೊಡೆದಿದ್ದಾರೆ. ತಲೆಯ ಐದಾರು ಕಡೆ ಹಲ್ಲೆ ನಡೆಸಿದ ಪರಿಣಾಮ ಸಜೀಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.