ಕರ್ನಾಟಕ

karnataka

ETV Bharat / state

ಭದ್ರಾವತಿ ಕಿಡ್ನಾಪ್​ ಪ್ರಕರಣ.. ತಂದೆಯ ವ್ಯವಹಾರಕ್ಕೆ ಮಗನನ್ನೇ ಅಪಹರಿಸಿದ ಖದೀಮರು ಅಂದರ್​ - ಮಹಮದ್ ಗೌಸ್​

ಅಪ್ಪನ ಲಕ್ಷ ಲಕ್ಷ ಹಣದ ವ್ಯವಹಾರ- ಸಾಲ ಹಿಂಪಡೆಯಲು ಪುತ್ರನನ್ನೇ ಕಿಡ್ನ್ಯಾಪ್​ ಮಾಡಿದ ಖದೀಮರು- ಆರೋಪಿಗಳನ್ನು ಬಂಧಿಸಿದ ನ್ಯೂ ಟೌನ್ ಠಾಣೆ ಪೊಲೀಸರು​

New Town police with kidnap suspects
ಕಿಡ್ನ್ಯಾಪ್ ಆರೋಪಿಗಳೊಂದಿಗೆ ನ್ಯೂ ಟೌನ್ ಪೊಲೀಸರು

By

Published : Dec 25, 2022, 8:41 PM IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಅಪಹರಣಪ್ರಕರಣ ಸದ್ದು ಮಾಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ಎಂಬ ಮಾತಿನಂತೆ ತಂದೆ ಮಾಡಿದ ಹಣದ ವ್ಯವಹಾರಕ್ಕಾಗಿ ಅವರ ಮಗನನ್ನೇ ಕಿಡ್ನ್ಯಾಪ್​ ಮಾಡಿರುವ ಅಚ್ಚರಿಯ ಘಟನೆ ಜಿಲ್ಲೆಯ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯ ಕೆಲವೇ ಮೀಟರ್ ದೂರದಲ್ಲಿ ಡಿಸೆಂಬರ್ 22 ರಂದು ಎಳನೀರು ವ್ಯಾಪಾರ ಮಾಡುತ್ತಿದ್ದ ಭದ್ರಾವತಿ ಬೊಮ್ಮನಕಟ್ಟೆಯ ನಿವಾಸಿ ಮಹಮದ್ ಅಜರ್ ಎಂಬುವರ ಮಗನಾದ ಮಹಮದ್ ಗೌಸ್(16) ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿರುತ್ತದೆ. ಈ ಕುರಿತು ಅಪಹರಣಕ್ಕೆ ಒಳಗಾದ ಬಾಲಕನ ತಂದೆ ಮಹಮದ್ ಅಜರ್ ಅವರು ಅದೇ ದಿನ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ಹಿನ್ನೆಲೆ..ಮಹಮದ್ ಅಜರ್ ಎಂಬುವರ ಮಕ್ಕಳಿಬ್ಬರು ತಂದೆಯ ಎಳನೀರು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಹೀಗಿರುವಾಗ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಎಳನೀರು ಖರೀದಿ ಮಾಡಿರುತ್ತಾರೆ. ನಂತರ ಎಳನೀರಿನ ಹಣ ನೀಡಲು ಗೂಗಲ್ ಪೇ ನೆಟ್ ವರ್ಕ್ ಇಲ್ಲದ ಕಾರಣ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಹೀಗಾಗಿ ಹಣ ಕಾರಿನಲ್ಲಿದೆ, ಕೊಡುವುದಾಗಿ ಹೇಳಿ ಕಾರಿನ ಬಳಿ ಕರೆದು ಕೊಂಡು ಹೋಗಿ ಅಲ್ಲಿ ನಾಲ್ವರು ಮಹಮದ್ ಅಜರ್​ನ ಕಿರಿಯ ಪುತ್ರ ಮಹಮದ್ ಗೌಸ್​ನನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿದ್ದರು.

ಇದನ್ನೂ ಓದಿ:ಅತ್ತಿಗೆಯ ಮೇಲೆ ಕಾಮದ ಕಣ್ಣು ಹಾಕಿದ ತಮ್ಮ; ಕೊಂದು ಜೈಲು ಸೇರಿದ ಅಣ್ಣ

ಮಗನನ್ನು ಹುಡುಕುತ್ತಿದ್ದ ತಂದೆಗೆ ಬಂತು ಫೋನ್​ ಕಾಲ್​.. ಇದರಿಂದ ಬೆಚ್ಚಿ ಬಿದ್ದ ಅಣ್ಣ ಆತನ ತಂದೆಗೆ ತಕ್ಷಣವೇ ಫೋನ್ ಕರೆ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾನೆ. ಇದರಿಂದ ಮಹಮದ್ ಅಜರ್ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ತನ್ನ ಮಗ ಪತ್ತೆಯಾಗದ ಕಾರಣ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ಅಷ್ಟರಲ್ಲಿ ಅಜರ್ ಅವರಿಗೆ ಒಂದು ಫೋನ್ ಕಾಲ್​ ಬರುತ್ತದೆ. ಫೋನ್ ಕಾಲ್​ನಲ್ಲಿ ಯಾಸೀನ್ ಖುರೇಷಿ ಅವರ ಜೊತೆ ಮಾಡಿದ ವ್ಯವಹಾರದ ಹಣವಾದ 20 ಲಕ್ಷವನ್ನು ಮರುದಿನ ಬೆಳಗ್ಗೆ 7 ಗಂಟೆ ಒಳಗೆ ನೀಡಬೇಕೆಂದು ಹೇಳಿ ಕರೆಯನ್ನು ಕಡಿತಗೊಳಿಸಿದ್ದರು.

ಈ ಕುರಿತು ತನಿಖೆಯನ್ನು ತೀವ್ರಗೊಳಿಸಿದ ಪೊಲೀಸ್​ ಇಲಾಖೆ, ತಂಡ ರಚನೆ ಮಾಡಿಕೊಂಡು ನ್ಯೂ ಟೌನ್ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಫೋನ್ ಕಾಲ್ ಟ್ರೇಸ್ ಮಾಡಿದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ 1) ಮುಭಾರಕ್ ಅಲಿಯಾಸ್ ಡಿಚ್ಚಿ(24), 2) ಜಾಬೀರ್ ಬಾಷಾ ಅಲಿಯಾಸ್ ರಾಬರ್ಟ್ (22), 3) ಮುಸ್ತಾಫಾ(26) , 4) ಅಬ್ದುಲ್ ಸಲಾಂ(26), 5) ಇರ್ಫಾನ್(31) ಎಂಬುವರನ್ನು ಬಂಧಿಸಲಾಗಿದೆ. ಇದರಲ್ಲಿ ಅಬ್ದುಲ್ ಸಲಾಂ ಸಾಗರದಲ್ಲಿ ಅಡಕೆ ವ್ಯಾಪಾರಿಯಾಗಿದ್ದಾರೆ. ಇವರ ಜೊತೆ ಕೃತ್ಯಕ್ಕೆ ಬಳಸಿದ ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅದೇನೆ ಆಗಲಿ ಶಾಂತಿಯಿಂದ ಇದ್ದ ಭದ್ರಾವತಿಯಲ್ಲಿ ಈ ಅಪಹರಣ ಪ್ರಕರಣದಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಅಪ್ಪನ ವ್ಯವಹಾರಕ್ಕೆ ಮಕ್ಕಳನ್ನು ಆರೋಪಿಗಳು ಟಾರ್ಗೆಟ್​ ಮಾಡುವುದರಿಂದ ಪೋಷಕರಲ್ಲಿ ತಮ್ಮ ಮಕ್ಕಳ ರಕ್ಷಣೆಯ ಬಗ್ಗೆ ಆತಂಕ ಮನೆ ಮಾಡಿದೆ.

ಇದನ್ನೂ ಓದಿ:ಕ್ಲಬ್​ ಚುನಾವಣೆಗೆ ಬಂದಿದ್ದ ಪೊಲೀಸ್​ ಅಧಿಕಾರಿಯ ಬೈಕ್​ ಎಗರಿಸಿದ ಖದೀಮರು

ABOUT THE AUTHOR

...view details