ಕರ್ನಾಟಕ

karnataka

ETV Bharat / state

ಕಿಚ್ಚನ ತವರಲ್ಲಿ ಬರ್ತ್​ಡೇ ಸಂಭ್ರಮ; ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದು ಹೀಗೆ - Kiccha Sudeep fans in Shimoga

ಕಿಚ್ಚ ಸುದೀಪ್​ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬ. ಇಂದು ಸುದೀಪ್​ ತವರು ಶಿವಮೊಗ್ಗದಲ್ಲೂ ಅಭಿಮಾನಿಗಳು ಸರಳವಾಗಿ ಬರ್ತ್​ಡೇ ಆಚರಿಸಿದ್ದಾರೆ.

Shimoga
ಅಭಿಮಾನಿಗಳು

By

Published : Sep 2, 2020, 7:36 PM IST

ಶಿವಮೊಗ್ಗ: ಕಿಚ್ಚ ಸುದೀಪ್ ತವರು ಜಿಲ್ಲೆ ಶಿವಮೊಗ್ಗದಲ್ಲಿ ಅಭಿಮಾನಿಗಳು ಸರಳವಾಗಿ‌ ಸುದೀಪ್ 47 ನೇ ಹುಟ್ಟು ಹಬ್ಬವನ್ನು ಆಚರಿಸಿದರು.

ನಗರದ ರವೀಂದ್ರ ನಗರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಿಚ್ಚ ಸುದೀಪ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು. ಇದೇ ಸಂದರ್ಭ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಪೊಲೀಸರಿಗೆ, ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಗೆ ಹಾಗೂ ಸೆಕ್ಯೂರಿಟಿಗಳಿಗೆ ಮಾಸ್ಕ್ ವಿತರಿಸಲಾಯಿತು.

ಕಿಚ್ಚನ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದು ಹೀಗೆ

ಇನ್ನು ನಗರದ ಆರಾಧ್ಯ ದೈವ ಕೋಟೆ ಶ್ರೀಆಂಜನೇಯ ದೇವಾಲಯದಲ್ಲಿ ಕಿಚ್ಚ ಸುದೀಪ್ ಹೆಸರಿನಲ್ಲಿ‌ ವಿಶೇಷ ಪೂಜೆ ಸಲ್ಲಿಸಿದರು. ಅಭಿನಯ‌ ಚಕ್ರವರ್ತಿ ಸುದೀಪ್ ಆವರಿಗೆ ದೇವರು ಆಯುಷ್ಯ, ಆರೋಗ್ಯ, ಐಶ್ವರ್ಯ ಸೇರಿದಂತೆ‌ ಜನ ಸೇವೆಗೆ ದೇವರು ಶಕ್ತಿ‌ ನೀಡಲಿ ಎಂದು ಪೂಜೆ ಸಲ್ಲಿಸಲಾಯಿತು. ಅಭಿಮಾನಿಗಳು‌ ಆಂಜನೇಯನಿಗೆ ವಿಶೇಷ ಫಲಗಳನ್ನು‌ ಅರ್ಪಿಸಿ ಪೂಜೆ ಸಲ್ಲಿಸಿದರು.

ಕಿಚ್ಚನ ಗೂಡು ಸಂಘ ಉದ್ಘಾಟನೆ:

ಸುದೀಪ್ ಅಭಿಮಾನಿಗಳು ಈ ವೇಳೆ‌ ಕಿಚ್ಚನ ಗೂಡು ಎಂಬ‌ ಸಂಘಕ್ಕೆ ಚಾಲನೆ ನೀಡಿದರು. ಕಿಚ್ಚನ ಗೂಡು ಲೋಗೊವನ್ನು ಪುಟ್ಟ ಬಾಲಕಿಯಿಂದ ಬಿಡುಗಡೆಗೊಳಿಸಿದರು. ಸುದೀಪ್ ಸಮಾಜ ಸೇವೆಯಲ್ಲಿ ತೊಡಗಿ‌ಕೊಂಡಿದ್ದಾರೆ. ಇವರ ಈ ಕಾರ್ಯವನ್ನು‌ ನಾವು ಆದರ್ಶವಾಗಿ ತೆಗದುಕೊಂಡು, ಅದರಂತೆ ಕಿಚ್ಚನ ಗೂಡು ಎಂಬ ಸಂಘವನ್ನು‌‌ ರಚನೆ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನ ಮಾಡುವುದಾಗಿ ಅಭಿಮಾನಿಗಳು‌ ತಿಳಿಸಿದ್ದಾರೆ. ನೆಚ್ಚಿನ ನಟನಿಗೆ ಜೈಕಾರ ಹಾಕುತ್ತಾ ತಮ್ಮ ನಾಯಕ ನಟನಿಗೆ ದೇವರು ಇನ್ನಷ್ಟು ಅರೋಗ್ಯ ನೀಡಿ‌ ಜನ ಸೇವೆ ನಡೆಸಲಿ ಎಂದು ಹರಸಿದರು.

ಹಣ ನೀಡಿದ ವೃದ್ಧೆ:

ಅಭಿಮಾನಿಗಳು ಕಿಚ್ಚ ಸುದೀಪ್‌ ಭಾವಚಿತ್ರದ ತಮ್ಮ ಹೊಸ‌ ಸಂಘದ ಲೋಗೊ ಜೊತೆ ಇದ್ದಾಗ ಅಲ್ಲಿಗೆ ಬಂದ ವೃದ್ದೆಯೊಬ್ಬರು ಸುದೀಪ್ ಭಾವಚಿತ್ರಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿದರು. ನಂತರ ತಮ್ಮ ಬಳಿ ಇದ್ದ 20 ರೂ. ಗಳನ್ನು ನೀಡಲು ಹೋದಾಗ ಅಭಿಮಾನಿಗಳು ಬೇಡವೆಂದರೂ‌ ಬಿಡದೆ, ತಮ್ಮ ಕಾಣಿಗೆ ಎಂದು ನೀಡಿದರು.

ಬೈಕ್ ರ್ಯಾಲಿ..

ಕಿಚ್ಚನ ಅಭಿಮಾನಿಗಳು ಅಭಿಮಾನಿಗಳು ಕೋಟೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ನಗರದ ಪ್ರಮುಖ ರಸ್ತೆಯಲ್ಲಿ ಬೈಕ್‌ ರ್ಯಾಲಿ ನಡೆಸಿದರು.

ABOUT THE AUTHOR

...view details