ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಹೀರೆಕಸವೆ ಗ್ರಾಮದಲ್ಲಿ ಕೆಳದಿ ಚೆನ್ನಮ್ಮನ ಕಾಲದ ಎರಡು ಲಿಂಗ ಮುದ್ರೆ ಶಾಸನಗಳು ಪತ್ತೆಯಾಗಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಚೆನ್ನಮ್ಮ ಕಾಲದ 2 ಶಾಸನಗಳು ಪತ್ತೆ! - Shimoga News
ಎರಡು ಶಾಸನಗಳು ತುಂಬಾ ಮಹತ್ವವುಳ್ಳ ಶಾಸನಗಳಾಗಿವೆ. ಶಿವಮೊಗ್ಗದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರ ಇಲಾಖೆ ಶಿವಪ್ಪ ನಾಯಕ ಅರಮನೆ ನಿರ್ದೇಶಕ ಆರ್.ಶೇಜೇಶ್ವರ ಹಾಗೂ ಇತಿಹಾಸ ಸಂಶೋಧಕ ರಮೇಶ ಹಿರೇಜಂಬೂರು ಜಂಟಿಯಾಗಿ ಕ್ಷೇತ್ರ ಕಾರ್ಯ ಕೈಗೊಂಡಾಗ ಇವು ಪತ್ತೆಯಾಗಿವೆ.
![ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಚೆನ್ನಮ್ಮ ಕಾಲದ 2 ಶಾಸನಗಳು ಪತ್ತೆ! ಕೆಳದಿ ಚೆನ್ನಮ್ಮ ಕಾಲದ ಶಾಸನಗಳು ಪತ್ತೆ](https://etvbharatimages.akamaized.net/etvbharat/prod-images/768-512-7992575-738-7992575-1594536942800.jpg)
ಗ್ರಾಮದ ಶಾಂತಪ್ಪ ದಾಸರ ಮನೆಯ ಹತ್ತಿರ ಲಿಂಗಮುದ್ರೆಯ ಕಲ್ಲಿನ ಶಾಸನ ಹಾಗೂ ಹಿರ್ಲೆರು ಮಲ್ಲಿಕಾರ್ಜುನ ಗೌಡ್ರ ಅಡಿಕೆಯ ತೋಟದಲ್ಲಿ ಲಿಂಗಮುದ್ರೆಯ ಕಲ್ಲಿನ ಶಾಸನ ಪತ್ತೆಯಾಗಿವೆ. ಎರಡು ಶಾಸನಗಳು ತುಂಬಾ ಮಹತ್ವವುಳ್ಳ ಶಾಸನಗಳಾಗಿವೆ. ಶಿವಮೊಗ್ಗದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರ ಇಲಾಖೆ ಶಿವಪ್ಪ ನಾಯಕ ಅರಮನೆ ನಿರ್ದೇಶಕ ಆರ್.ಶೇಜೇಶ್ವರ ಹಾಗೂ ಇತಿಹಾಸ ಸಂಶೋಧಕ ರಮೇಶ ಹಿರೇಜಂಬೂರು ಜಂಟಿಯಾಗಿ ಕ್ಷೇತ್ರ ಕಾರ್ಯ ಕೈಗೊಂಡಾಗ ಇವು ಪತ್ತೆಯಾಗಿವೆ.
ಈ ಶಾಸನಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಇತಿಹಾಸ ಸಂಶೋಧಕ ರಮೇಶ ಹೀರೇಜಂಬೂರು, ಶಾಸನವನ್ನು ಓದಿ ಕೊಟ್ಟ ಡಾ. ಜಗದೀಶ ಹಾಗೂ ಹೀರೆ ಕಸವೆ ಗ್ರಾಮದ ಶಿಕ್ಷಕರಾದ ಸುಧಾಕರ, ಪುಟ್ಟರಾಜು ಗೌಡು, ಗಣಪತಿ, ನಾಗರಾಜ, ದಿನೇಶ್ ಬಾಬು, ಉದಯಬಾಬು ಅವರಿಗೆ ಆರ್.ಶೇಜೇಶ್ವರ ಧನ್ಯವಾದ ತಿಳಿಸಿದ್ದಾರೆ .