ಶಿವಮೊಗ್ಗ: ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಹಲವು ನಗರ, ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದೆ. ಆದ್ರೆ ಶಿವಮೊಗ್ಗ ಹೊರವಲಯದ ಕಾಶಿಪುರ ಬಡಾವಣೆಯ ನಿವಾಸಿಗಳು ತಮ್ಮ ಏರಿಯಾವನ್ನು ತಾವೇ ಲಾಕ್ ಮಾಡಿಕೊಳ್ಳುವುದರ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಶಿವಮೊಗ್ಗ: ಕೊರೊನಾ ತಡೆಗೆ ಸ್ವಯಂ ಲಾಕ್ಡೌನ್ ಮಾಡಿಕೊಂಡ ಕಾಶಿಪುರ ನಿವಾಸಿಗಳು! - shimogga latest news
ಕಾಶಿಪುರ ಬಡಾವಣೆಯಲ್ಲಿ 30ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುವುದರ ಜತೆಗೆ ನಾಲ್ಕೈದು ಸಾವು ಸಂಭವಿಸಿದೆ. ಈ ಹಿನ್ನೆಲೆ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳು ತಮ್ಮ ಪ್ರದೇಶವನ್ನು ಸ್ವತಃ ತಾವೇ ಸಂಪೂರ್ಣವಾಗಿ ಲಾಕ್ಡೌನ್ ಮಾಡಿಕೊಂಡಿದ್ದಾರೆ.
ಸ್ವಯಂ ಲಾಕ್ಡೌನ್ ಮಾಡಿಕೊಂಡ ಕಾಶಿಪುರ ನಿವಾಸಿಗಳು!
ಕಾಶಿಪುರ ಬಡಾವಣೆಯಲ್ಲಿ 30ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜತೆಗೆ ನಾಲ್ಕೈದು ಸಾವು ಸಂಭವಿಸಿದೆ. ಹಾಗಾಗಿ ಇದು ಮುಂದುವರೆಯಬಾರದೆಂಬ ನಿಟ್ಟಿನಲ್ಲಿ ಕಾಶಿಪುರ ನಿವಾಸಿಗಳು ತೀರ್ಮಾನ ಮಾಡಿ ತಮ್ಮ ಪ್ರದೇಶವನ್ನು ಸ್ವತಃ ತಾವೇ ಲಾಕ್ಡೌನ್ ಮಾಡಿಕೊಂಡಿದ್ದಾರೆ. ತಮ್ಮ ಬಡಾವಣೆಯ ಪ್ರವೇಶ ದ್ವಾರವನ್ನೇ ಬಂದ್ ಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಪತಿಯ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದ ಪತ್ನಿಯೂ ಕೊನೆಯುಸಿರು!