ಶಿವಮೊಗ್ಗ:ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರಿಗೂ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ: ಪರಿಹಾರಕ್ಕಾಗಿ ಡಿಸಿಗೆ ಮನವಿ ಸಲ್ಲಿಸಿದ ಬಿಸಿಯೂಟ ಕಾರ್ಮಿಕರು - Karnataka State akshara Dasoha Employees Union
ಸರ್ಕಾರ ನಮಗೂ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪರಿಹಾರಕ್ಕಾಗಿ ಡಿ.ಸಿಗೆ ಮನವಿ ಸಲ್ಲಿಸಿದ ಬಿಸಿಯೂಟ ಕಾರ್ಮಿಕರು
ನಾವೆಲ್ಲರೂ 18-19 ವರ್ಷಗಳಿಂದ ಈ ವೃತ್ತಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದೇವೆ. ಕೊರೊನಾ ವೈರಸ್ ಹಾವಳಿಂದಾಗಿ ಶಾಲೆಗಳು ತೆರೆದಿಲ್ಲ. ಹಾಗಾಗಿ ನಮಗೆ ಎರಡು ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡಬೇಕು ಹಾಗೂ ನಮ್ಮನ್ನು ಕಾಯಂ ನೌಕರರಾಗಿ ಪರಿಗಣಿಸಬೇಕು.
ವೇತನ ಹೆಚ್ಚಳ ನೀಡಬೇಕು ಹಾಗೂ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಶುಲ್ಕ ಮತ್ತು ಇತರೆ ಶುಲ್ಕಗಳಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕು. ಎಲ್ಐಸಿ ಆಧಾರಿತ ಪೆನ್ಷನ್ ನೀಡಬೇಕು. ಕೇಂದ್ರ ಸರ್ಕಾರದ 20 ಲಕ್ಷ ಪ್ಯಾಕೇಜ್ನಲ್ಲಿ ನಮಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.