ಕರ್ನಾಟಕ

karnataka

ETV Bharat / state

ಶಿವಮೊಗ್ಗದ ಕುಖ್ಯಾತ ರೌಡಿಗಳ ಶಿಕ್ಷೆ ಅವಧಿ ವಿಸ್ತರಿಸಿ ಸರ್ಕಾರದ ಆದೇಶ

ಕುಖ್ಯಾತ ರೌಡಿ ಜಮೀರ್ ಅಲಿಯಾಸ್ ಬಚ್ಚಾ ಸೇರಿದಂತೆ ಮೂವರು ಅಪರಾಧಿಗಳ ಬಂಧನದ ಅವಧಿನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಿವಮೊಗ್ಗದ ಕುಖ್ಯಾತ ರೌಡಿಗಳ ಶಿಕ್ಷೆ ಅವಧಿ ವಿಸ್ತರಿಸಿ ಸರ್ಕಾರ ಆದೇಶ
ಶಿವಮೊಗ್ಗದ ಕುಖ್ಯಾತ ರೌಡಿಗಳ ಶಿಕ್ಷೆ ಅವಧಿ ವಿಸ್ತರಿಸಿ ಸರ್ಕಾರ ಆದೇಶ

By

Published : Aug 27, 2022, 7:57 AM IST

ಶಿವಮೊಗ್ಗ: ಹಲವು ಅಪರಾಧ ಕೃತ್ಯಗಳಿಂದಶಿವಮೊಗ್ಗ ನಗರದ ಜನತೆಯ ನಿದ್ದೆಗೆಡಿಸಿದ್ದ ಮೂವರು ರೌಡಿಗಳ ಬಂಧನದ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಜಮೀರ್ ಅಲಿಯಾಸ್ ಬಚ್ಚಾ(31), ಚೋರ್ ಸಲೀಂ (36) ಹಾಗೂ ಅಬೀದ್ ಖಾನ್ ಅಲಿಯಾಸ್ ಕಡೇಕಲ್ ಅಬೀದ್ (34) ಅವರ ಶಿಕ್ಷೆ ಸರ್ಕಾರ ವಿಸ್ತರಿಸಿದೆ.

ಗೂಂಡಾ ಕಾಯ್ದೆಯಡಿ ಬಂಧನ: ಈ ಮೂವರನ್ನು ಗೂಂಡಾ ಕಾಯ್ದೆಯಡಿ ಆರು ತಿಂಗಳ ಅವಧಿಗೆ ಬಂಧಿಸಲಾಗಿತ್ತು. ಅಲ್ಲದೆ ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಬಚ್ಚಾನನ್ನು ಬಂಧನದಲ್ಲಿಡಬೇಕೆಂಬ ವರದಿಯ ಮೇರೆಗೆ ಸರ್ಕಾರ ಈತನ ಬಂಧನದ ಅವಧಿಯನ್ನು ಒಂದು ವರ್ಷಕ್ಕೆ ಮುಂದುವರೆಸಿದೆ. ಅದರಂತೆ ಚೋರ್ ಸಲೀಂ ಹಾಗೂ ಕಡೇಕಲ್ ಅಬೀದ್ ಬಂಧನವನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ಮುಂದುವರೆಸಿದೆ.‌ ಇದರಲ್ಲಿ ಜಮೀರ್​​ನನ್ನು ಬಂಧಿಸಿ ಈಗಾಗಲೇ ಕಲಬುರಗಿ ಜೈಲಿನಲ್ಲಿ ಇಡಲಾಗಿದೆ.

ಅಲ್ಲದೇ ಹಲವು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾನೂನು ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಕುಖ್ಯಾತ ರೌಡಿ ಜಮೀರ್ ಅಲಿಯಾಸ್ ಬಚ್ಚಾ:ಟಿಪ್ಪುನಗರದ ಜಮೀರ್ ಅಲಿಯಾಸ್ ಬಚ್ಚಾ 17ನೇ ವಯಸ್ಸಿನಿಂದಲೇ ರೌಡಿಸಂಗೆ ಇಳಿದು ಇಲ್ಲಿಯವರೆಗೆ ಸುಮಾರು 22 ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಶಿಕ್ಷೆಯ ಅವಧಿ ವಿಸ್ತರಿಸುವಂತೆ ಜಿಲ್ಲಾಡಳಿತದ ಮನವಿ ಪುರಸ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

(ಇದನ್ನೂ ಓದಿ: ಗಣೇಶ ಚತುರ್ಥಿ, ಬಿಬಿಎಂಪಿ ಚುನಾವಣೆ: ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ)

ABOUT THE AUTHOR

...view details