ಕರ್ನಾಟಕ

karnataka

ETV Bharat / state

ಶಿವಮೊಗ್ಗ ಸಾಹಿತ್ಯ ಭವನ ನಿರ್ಮಾಣದ ಅಡಿಗಲ್ಲು ಮರು ಪ್ರತಿಷ್ಠಾಪಿಸಲು ಒತ್ತಾಯ

ಇತ್ತೀಚೆಗೆ ನಡೆದ ಸಾಹಿತ್ಯ ಗ್ರಾಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿ. ಮಂಜುನಾಥ್ ಅವರನ್ನು ಕಡೆಗಣಿಸಿರುವುದು , ಮರೆಮಾಚಿರುವ ಸಾಹಿತ್ಯ ಭವನ ನಿರ್ಮಾಣದ ಅಡಿಗಲ್ಲನ್ನು ಜಿಲ್ಲಾಡಳಿತ ಮರು ಪ್ರತಿಷ್ಠಾಪಿಸಬೇಕು..

By

Published : Oct 30, 2020, 5:31 PM IST

shimogha
ಶಿವಮೊಗ್ಗ

ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯ ಗ್ರಾಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿ. ಮಂಜುನಾಥ್ ಅವರನ್ನು ಕಡೆಗಣಿಸಿರುವುದು ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್​​ನ ಸದಸ್ಯರಾದ ಶಿವಮೂರ್ತಿ ಹೇಳಿದ್ದಾರೆ.

ಸಾಹಿತ್ಯ ಭವನ ಅಡಿಗಲ್ಲು ಮರು ಸ್ಥಾಪನೆಗೆ ಆಗ್ರಹ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಹಿತ್ಯ ಗ್ರಾಮ ಕಲ್ಪನೆ ಮೊಳಕೆಯೊಡೆದಿದ್ದು ಈ ಹಿಂದಿನ ಕಸಬ ಅಧ್ಯಕ್ಷರಾದ ಡಿ. ಮಂಜುನಾಥ್ ಹಾಗೂ ಅವರ ಕ್ರಿಯಾಶೀಲ ತಂಡದಿಂದ. ಆದರೆ, ಅವರನ್ನೇ ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿ.ಮಂಜುನಾಥ್ ಅವರು ಕನ್ನಡ ಸಾಹಿತ್ಯ ಪರಿಷತ್​​ನ ಅಧ್ಯಕ್ಷರಾಗುವವರೆಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಕಚೇರಿ ಸಹ ಇರಲಿಲ್ಲ. ಅವರು ಅಧ್ಯಕ್ಷರಾದ ನಂತರ ಸಾಹಿತ್ಯ ಗ್ರಾಮದ ಕಲ್ಪನೆ ಜೊತೆಗೆ ಭವನ ನಿರ್ಮಾಣಕ್ಕೆ ಶ್ರಮಿಸಿ ಒಂದು ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು.

ಆದರೆ, ಈಗಿರುವ ಅಧ್ಯಕ್ಷರು ತಮ್ಮದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಖಂಡನೀಯ. ಜೊತೆಗೆ ನೂತನ ಸಾಹಿತ್ಯ ಭವನ ಉದ್ಘಾಟನೆಯ ವೇಳೆಯಲ್ಲಿ ಸಹ ಡಿ.ಮಂಜುನಾಥ್ ಅವರನ್ನು ಕಾರ್ಯಕ್ರಮಕ್ಕೆ ಕರೆಯದೇ ಕಡೆಗಣಿಸಿದ್ದಾರೆ. ಜೊತೆಗೆ ಸಾಹಿತ್ಯ ಭವನ ನಿರ್ಮಾಣದ ಅಡಿಗಲ್ಲನ್ನು ಮರೆಮಾಚಿರುವುದು ಕೂಡ ಆಕ್ಷೇಪಣಾರ್ಹ. ಹಾಗಾಗಿ, ಜಿಲ್ಲಾಡಳಿತ ಅಡಿಗಲ್ಲನ್ನು ಮರು ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.

For All Latest Updates

TAGGED:

ABOUT THE AUTHOR

...view details