ಕರ್ನಾಟಕ

karnataka

ETV Bharat / state

ಆ.18ಕ್ಕೆ ಬಿಡುಗಡೆಯಾಗುವ 'ಬ್ಯಾಂಗ್' ಚಿತ್ರ ನೋಡುವಂತೆ ಶಾನ್ವಿ ಶ್ರೀವಾಸ್ತವ್ ಮನವಿ - ಆ 18ಕ್ಕೆ ಬಿಡುಗಡೆಯಾಗುವ ಬ್ಯಾಂಗ್ ಚಿತ್ರ

ಬ್ಯಾಂಗ್ ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗುತ್ತಿದ್ದು, ಸಿನಿಮಾ ನೋಡಿ ಎಲ್ಲರೂ ಬೆಂಬಲಿಸಬೇಕು ಎಂದು ನಟಿ ಶಾನ್ವಿ ಶ್ರೀವಾತ್ಸವ್ ಮನವಿ ಮಾಡಿದ್ದಾರೆ.

bang
ಬ್ಯಾಂಗ್

By

Published : Aug 16, 2023, 11:49 AM IST

ಶಿವಮೊಗ್ಗ : ಇಲ್ಲಿಯವರೆಗೆ ನಾವು ಮಾಡಿದ ಸಿನಿಮಾಗಳಿಗೆ ಬೆಂಬಲ ನೀಡಿದ್ದೀರಿ, ಮುಂದೆಯೂ ನಿಮ್ಮ ಬೆಂಬಲ ಬೇಕಿದೆ. ಇದೇ ತಿಂಗಳ 18 ಕ್ಕೆ ಬ್ಯಾಂಗ್ ಚಲನಚಿತ್ರ ಬಿಡುಗಡೆಯಾಗುತ್ತಿದ್ದು ಎಲ್ಲರೂ ಸಿನಿಮಾ ನೋಡಿ ಬೆಂಬಲಿಸಬೇಕು ಎಂದು ನಟಿ ಶಾನ್ವಿ ಶ್ರೀವಾತ್ಸವ್ ಮನವಿ ಮಾಡಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಹಳ ದಿನಗಳ ನಂತರ ಸಿನಿಮಾದಲ್ಲಿ ನಟಿಸಿದ್ದೇನೆ. ಅಭಿಮಾನಿಗಳು ನೀವು ಎಲ್ಲಿ ಹೋಗಿದ್ದೀರಾ? ಅಂತ ಕೇಳುತ್ತಿದ್ದರು. ಇಂತಹ ಸಿನಿಮಾಕ್ಕಾಗಿ ಕಾಯುತ್ತಿದ್ದೆ. ಬ್ಯಾಂಗ್ ಚಿತ್ರದಲ್ಲಿ ದೊಡ್ಡ ಸ್ಟಾರ್ ನಟರುಗಳಿಲ್ಲ, ಆದರೂ ನಿಮ್ಮ ಬೆಂಬಲವೇ ನಮಗೆ ಎಲ್ಲಾ ಎಂದು ತಿಳಿಸಿದರು.

ನಂತರ ಚಿತ್ರದ ನಿರ್ದೇಶಕ ಜಗದೀಶ್ ಮಾತನಾಡಿ, ಶಿವಮೊಗ್ಗದವರೇ ಆದ ನಾವು ನಮ್ಮ ಜಿಲ್ಲೆಯಿಂದಲೇ ಚಿತ್ರದ ಪ್ರಮೋಷನ್​ ಪ್ರಾರಂಭಿಸಿದ್ದೇವೆ. ಶಿವಮೊಗ್ಗದವರೇ ಸಿನಿಮಾದಲ್ಲಿ ಬಹುತೇಕರಿದ್ದೇವೆ, ಇಡೀ ಚಿತ್ರ ಒಂದೊಳ್ಳೆ ಮನೋರಂಜನೆ ನೀಡಲಿದೆ. ಹಾಗಾಗಿ ಹೊಸಬರ ಚಿತ್ರವನ್ನು ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ :'ಬ್ಯಾಂಗ್' ಸಿನಿಮಾ‌ ಶೂಟಿಂಗ್​ ವೇಳೆ ಅವಘಡ : ನಟಿ ಶಾನ್ವಿ ಕಾಲಿಗೆ ಗಾಯ

ಮುಂದಿನ ವಾರ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಗೊಳ್ಳುತ್ತಿದ್ದು, ನಮಗೆ ಸ್ವಲ್ಪ ಭಯವಿದೆ. ಹಾಗಾಗಿ ಎಲ್ಲರೂ ಹೊಸಬರ ಚಿತ್ರವನ್ನು ನೋಡಿ ಬೆಂಬಲಿಸಿ ಪ್ರೋತ್ಸಾಹಿಸಬೇಕು. ಈ ಚಿತ್ರವು 48 ಗಂಟೆಗಳಲ್ಲಿ ನಡೆಯುವ ಒಂದು ಸುಂದರ ಕಥೆಯಾಗಿದ್ದು, ಸಿನಿಮಾದಲ್ಲಿ ಆಕ್ಷನ್ ಸಹ ಇರಲಿದೆ ಒಟ್ಟಾರೆ ಚಿತ್ರವು ಮನೋರಂಜನಾತ್ಮಕವಾಗಿದ್ದು ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ಇದನ್ನೂ ಓದಿ :'ಬ್ಯಾಂಗ್​' ಬಿಡುಗಡೆಗೆ ಸಿದ್ಧ : ಶಾನ್ವಿ ಶ್ರೀವಾತ್ಸವ್ ಸಿನಿಮಾಗೆ ಕಿಚ್ಚ ಸುದೀಪ್​ ಸಾಥ್​

ಚಿತ್ರವು ಯುಕೆ ಪ್ರೊಡಕ್ಷನ್ ನಿಂದ ನಿರ್ಮಾಣವಾಗಿದ್ದು, ನಿರ್ಮಾಪಕರಾದ ಪೂಜಾ ವಸಂತ್ ಕುಮಾರ್ ಹಣ ಹೂಡಿದ್ದಾರೆ. ಸಂಗೀತ ನಿರ್ದೇಶಕ ಹಾಗೂ ನಟ ರಿತ್ವಿಕ್ ಮುರಳೀಧರ್ ಸಂಗೀತವಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ಜೊತೆಗೆ, ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್​ ಅವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ :'ಬ್ಯಾಂಗ್'ನಲ್ಲಿ ಶಾನ್ವಿ ಶ್ರೀವಾಸ್ತವ್ 'ಗ್ಯಾಂಗ್ ಸ್ಟಾರ್'..!

ಈ ಹಿಂದೆ ಚಿತ್ರದಲ್ಲಿ ಬಣ್ಣಹಚ್ಚಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್​ , "ನಿರ್ದೇಶಕ ಗಣೇಶ್ ಹಾಗೂ ಸಂಗೀತ ನಿರ್ದೇಶಕ ರಿತ್ವಿಕ್ ನನ್ನನ್ನು ಭೇಟಿಯಾಗಲು ಬಂದಾಗ ನಾನು ಹಾಡು ಹಾಡಲು ಕೇಳಿರುವುದಕ್ಕೆ ಬಂದಿದ್ದಾರೆ ಅಂದುಕೊಂಡೆ. ಆದರೆ, ಅವರು ನೀವು ಚಿತ್ರದಲ್ಲಿ ಅಭಿನಯಿಸಬೇಕು ಎಂದಾಗ ಆಶ್ಚರ್ಯವಾಯಿತು. ನಾನು ಮೊದಲು ಒಪ್ಪಲಿಲ್ಲ, ಅವರು ಬಿಡಲಿಲ್ಲ. ಕೊನೆಗೂ ಈ ಚಿತ್ರದಲ್ಲಿ ನಟಿಸಿದ್ದೇನೆ. ಶಾನ್ವಿ ಅವರ ತಂದೆಯ ಪಾತ್ರ ನನ್ನದು. ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ" ಎಂದು ಹೇಳಿದ್ದರು.

ಇದನ್ನೂ ಓದಿ :Bang : ಶಾನ್ವಿ ಶ್ರೀವಾಸ್ತವ್​ ಗ್ಯಾಂಗ್​ಸ್ಟರ್​ ಅವತಾರ, ಫ್ಯಾನ್ಸ್​ ಫಿದಾ

ABOUT THE AUTHOR

...view details