ಕರ್ನಾಟಕ

karnataka

ETV Bharat / state

ಪೌರತ್ವ ಕಾಯ್ದೆ ವಿರೋಧಿ ಹೋರಾಟ ಅಶಾದಾಯಕ: ಕಾಗೋಡು ತಿಮ್ಮಪ್ಪ - sagara shimogga latest news

ನೆಹರೂ ಮೈದಾನದಲ್ಲಿ ಮಂಗಳವಾರ ಸಾಗರದ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಮತ್ತು ಕರ್ನಾಟಕ ಅಂಜುಮನ್ ತಂಜೀಮ್ ಸೋಷಿಯಲ್ ಮೂವ್‍ಮೆಂಟ್ ವತಿಯಿಂದ ನಮ್ಮ ಸಂವಿಧಾನ ಉಳಿಸಿ ಸಮಾವೇಶಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಕಾಗೊಡು ತಿಮ್ಮಪ್ಪ ಆರೋಪ.

Kagodu timmappa outrage against CAA!
ಮೋದಿ, ಶಾ ಅವರ ಟಾರ್ಗೆಟ್ ಮುಸ್ಲಿಂ ಬಂಧುಗಳು: ಕಾಗೋಡು ತಿಮ್ಮಪ್ಪ !

By

Published : Feb 5, 2020, 1:06 PM IST

ಶಿವಮೊಗ್ಗ:ಸಿಎಎ, ಎನ್ಆರ್​ಸಿ, ಎನ್​ಪಿಆರ್ ಎಂಬ ಕತ್ತಿ ಅಲ್ಪಸಂಖ್ಯಾತರ ಮೇಲೆ ತೂಗುತ್ತಿದೆ. ಇದು ಖಂಡನೀಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾಗರದಲ್ಲಿ ಹೇಳಿದ್ದಾರೆ.

ಮಂಗಳವಾರ ನೆಹರೂ ಮೈದಾನದಲ್ಲಿ ಸಾಗರದ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಮತ್ತು ಕರ್ನಾಟಕ ಅಂಜುಮನ್ ತಂಜೀಮ್ ಸೋಷಿಯಲ್ ಮೂವ್‍ಮೆಂಟ್ ವತಿಯಿಂದ ನಡೆದ ನಮ್ಮ ಸಂವಿಧಾನ ಉಳಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ತಿಮ್ಮಪ್ಪ, ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಕಿಡಿಕಾರಿದರು.

ನಮ್ಮ ಸಂವಿಧಾನ ಉಳಿಸಿ ಸಮಾವೇಶ

ಬಿಜೆಪಿ ಈ ಕಾಯ್ದೆ ಅನುಷ್ಠಾನಗೊಳಿಸುತ್ತಿರುವ ಉದ್ದೇಶದ ಹಿಂದಿನ ಕುತಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಕಾಯ್ದೆ ಅನುಷ್ಠಾನಕ್ಕೆ ತನ್ನಿ ಎಂದು ಯಾರೂ ಒತ್ತಾಯ ಮಾಡಿರಲಿಲ್ಲ. ಜೊತೆಗೆ ಯಾರೂ ಹೋರಾಟ ಮಾಡಿ ಕೇಂದ್ರವನ್ನು ಒತ್ತಾಯಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಏಕಾಏಕಿ ಈ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಕಿಡಿಕಾರಿದರು.

ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟ ಆಶಾದಾಯಕ ಬೆಳವಣಿಗೆಯಾಗಿದೆ. ಭವಿಷ್ಯದ ದೃಷ್ಟಿಯಿಂದ ಮತ್ತು ದೇಶದ ಐಕ್ಯತೆ, ಸಮಗ್ರತೆ ಹಿನ್ನೆಲೆಯಲ್ಲಿ ತಿದ್ದುಪಡಿ ಕಾಯ್ದೆಯಲ್ಲಿ ಎಲ್ಲ ಜನಾಂಗವನ್ನು ಸೇರಿಸುವಂತೆ ಒತ್ತಾಯಿಸಿದರು.

ABOUT THE AUTHOR

...view details