ಕರ್ನಾಟಕ

karnataka

ETV Bharat / state

ಹೋರಾಟದಿಂದ ಬಂದ ನನ್ನನ್ನೇ ಸೋಲಿಸಿದ್ದರು: ಕಾಗೋಡು ತಿಮ್ಮಪ್ಪ - ಈಟಿವಿ ಭಾರತ ಕನ್ನಡ

ನಾನು ಸಚಿವನಾಗಿ ಸಭಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆದರೆ ಜನ ನನ್ನ ಮೇಲೆ ಕೋಪಗೊಂಡು ಸೋಲಿಸಿದ್ದರು ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Etv Bharat
ಕಾಗೋಡು ತಿಮ್ಮಪ್ಪ

By

Published : Nov 15, 2022, 5:44 PM IST

ಶಿವಮೊಗ್ಗ: ನಾನು ಹೋರಾಟದ ಮೂಲಕ ಅಧಿಕಾರಕ್ಕೆ ಬಂದವನು, ಆದರೆ ಜನ ನನ್ನ ಮೇಲೆ ಕೋಪಗೊಂಡು ಹೋದ ಬಾರಿ ಸೋಲಿಸಿದ್ದರು. ಈ ಬಾರಿ ಜನ ಏನು ಮಾಡುತ್ತಾರೆ ನೋಡೋಣ. ಇದರಿಂದ ನಾನು ಈ ಭಾರಿ ಚುನಾವಣಾ ಆಕಾಂಕ್ಷಿ ಎಂದು ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್​ ಬೇಕಾದವರು ಕೆಲಸ ಮಾಡಬೇಕು, ಪಕ್ಷದ ಕೆಲಸದಲ್ಲಿ ತನ್ನನ್ನು ತೂಡಗಿಸಿಕೊಳ್ಳಬೇಕು. ಆಗ ಆತ ನಾಯಕವಾಗಿ ಬೆಳೆಯುತ್ತಾನೆ. ಆಗ ಚುನಾವಣೆಗೆ ನಿಲ್ಲಬಹುದು, ಗೆಲ್ಲಬಹುದು. ನಾನು ಕಳೆದ ಚುನಾವಣೆಯಲ್ಲಿ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿಲ್ಲ ಎಂದು ಇದೇ ವೇಳೆ ಹೇಳಿದರು.

ನಾನು ಹೋರಾಟದಿಂದ ಬಂದವನು, ನನ್ನನ್ನೆ ಸೋಲಿಸಿದ್ದರು

ಮಗಳು ರಾಜನಂದಿನಿ ಸಹ ಅರ್ಜಿ ಸಲ್ಲಿಕೆ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಪಕ್ಷಕ್ಕೆ ದುಡಿಯುತ್ತಿದ್ದಾರೆ. ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಸೋತ ಕ್ಷೇತ್ರದಿಂದಲೇ ಗೆದ್ದು ಜನ ನಾಯಕ ಅನಿಸಿಕೊಳ್ಳಲಿ: ಕೆ.ಎಸ್ ಈಶ್ವರಪ್ಪ

ABOUT THE AUTHOR

...view details