ಕರ್ನಾಟಕ

karnataka

ETV Bharat / state

ಕುವೆಂಪು ವಿವಿ ವ್ಯಾಪ್ತಿಯಲ್ಲಿ 10 ಪರೀಕ್ಷಾ ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ - ಕುವೆಂಪು ವಿವಿ ವ್ಯಾಪ್ತಿಯಲ್ಲಿ 10 ಪರೀಕ್ಷಾ ಕೇಂದ್ರಗಳಲ್ಲಿ ಕೆ-ಸೆಟ್ ಅರ್ಹತಾ ಪರೀಕ್ಷೆ

ಏಪ್ರಿಲ್ 11ರಂದು ಶಿವಮೊಗ್ಗ ನಗರದ ವಿವಿಧ ಕಾಲೇಜುಗಳಲ್ಲಿ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನಡೆಯಲಿದೆ.

k-set-qualification-exam-on-april-11th
ಕೆ-ಸೆಟ್ ಅರ್ಹತಾ ಪರೀಕ್ಷೆ

By

Published : Apr 9, 2021, 4:42 PM IST

ಶಿವಮೊಗ್ಗ:ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಶಿವಮೊಗ್ಗದ 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಕುವೆಂಪು.ವಿ.ವಿ ತಿಳಿಸಿದೆ.

ಏಪ್ರಿಲ್ 11ರಂದು ಶಿವಮೊಗ್ಗ ನಗರದ ವಿವಿಧ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗಾಗಿ ಮೂರು ಕ್ಲಸ್ಟರ್‌ಗಳಡಿ ಒಟ್ಟು 10 ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಸಹ್ಯಾದ್ರಿ ಕಾಲೇಜು ಆವರಣದಲ್ಲಿರುವ ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ವಿಜ್ಞಾನ ಕಾಲೇಜು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಮೊದಲ ಕ್ಲಸ್ಟರ್‌ನಲ್ಲಿದ್ದರೆ, ಡಿವಿಎಸ್ ಕಲೆ ಮತ್ತು ವಿಜ್ಞಾನ ಕಾಲೇಜು, ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಡಿವಿಎಸ್ ಸಂಯುಕ್ತ ಪಿಯು ಕಾಲೇಜು ಎರಡನೆಯ ಕ್ಲಸ್ಟರ್‌ನಲ್ಲಿದೆ. ಇನ್ನು ಎಸ್‌ಆರ್‌ಎನ್‌ಎಂಎನ್ ಅನ್ವಯಿಕ ವಿಜ್ಞಾನ ಕಾಲೇಜು, ಎಟಿಎನ್‌ಸಿಸಿ ಕಾಲೇಜು, ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜು ಮತ್ತು ಎಚ್‌ಎಸ್‌ಆರ್ ನ್ಯಾಷನಲ್ ಪಿಯು ಕಾಲೇಜುಗಳನ್ನು ಮೂರನೆಯ ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ.

ಪರೀಕ್ಷೆಯ ಮೊದಲ ಪೇಪರ್ ಬೆಳಗ್ಗೆ 9:30 ರಿಂದ 10:30ರವರೆಗೆ ಹಾಗೂ 30 ನಿಮಿಷದ ಬಿಡುವಿನ ಬಳಿಕ ಎರಡನೆಯ ಪೇಪರ್ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.

ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ ಮತ್ತು ಪ್ರವೇಶಾತಿ ಚೀಟಿಯೊಂದಿಗೆ ಬೆಳಗ್ಗೆ 8:30ಕ್ಕೆ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ವರದಿ ಮಾಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿ ಅನ್ವಯವಾಗುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷಾ ಸಂಯೋಜಕ ಡಾ. ರಾಜೇಶ್ವರ್ ತಿಳಿಸಿದ್ದಾರೆ.

ABOUT THE AUTHOR

...view details