ಶಿವಮೊಗ್ಗ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಮಂತ್ರಿ ಕಚೇರಿಗಾದರೂ ಇಲ್ಲ ಮಾಧ್ಯಮವದವರಿಗಾದರೂ ಕಮಿಷನ್ ಕುರಿತ ದಾಖಲೆ ಬಿಡುಗಡೆ ಮಾಡದೆ ಹೋದರೆ ಅದು ರಾಜಕೀಯ ಷಡ್ಯಂತ್ರ ಎಂದೆನ್ನಿಸುತ್ತದೆ. ಕಮಿಷನ್ ಯಾರು, ಯಾರಿಗೆ ಕೊಟ್ಟಿದ್ದಾರೆ ಎಂಬುದರ ಬಗ್ಗೆ ದಾಖಲೆ ಕೊಡದಿದ್ದಲ್ಲಿ ಕೇವಲ ಆರೋಪವಾಗಿ ಉಳಿಯುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಕೆಂಪಣ್ಣ ಕಮಿಷನ್ ಕುರಿತು ದಾಖಲೆ ಬಿಡುಗಡೆ ಮಾಡಲಿ : ಕೆ.ಎಸ್.ಈಶ್ವರಪ್ಪ - ಕಮಿಷನ್ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ
ಕೆಂಪ್ಪಣ್ಣ ಅವರು ಈಗಲಾದರೂ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಅದು ರಾಜಕೀಯ ಷಡ್ಯಂತ್ರ ಎಂಬುದು ಸ್ವಷ್ಟವಾಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು..

ಕೆ.ಎಸ್.ಈಶ್ವರಪ್ಪ
ಕೆಂಪಣ್ಣ ಕಮಿಷನ್ ಕುರಿತು ದಾಖಲೆ ಬಿಡುಗಡೆ ಮಾಡಲಿ
ಶಿವಮೊಗ್ಗದ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಗುತ್ತಿಗೆದಾರರ ಸಂಘದ ಸಭೆ ನಡೆಸಿದ್ದರು. ಆದರೆ, ನಂತರ ಏನಾಯ್ತು, ಗುತ್ತಿಗೆದಾರರು ಯಾಕೆ ಸುಮ್ಮನಾದರು ಎಂದು ತಿಳಿಸಬೇಕು ಎಂದರು. ಈಗ ನಿಮ್ಮ ಪತ್ರಕ್ಕೆ ಗೃಹ ಇಲಾಖೆಯವರು ಸಾಕ್ಷ್ಯ ಕೇಳಿದ್ದಾರೆ. ಈಗಲಾದರೂ ಗೃಹ ಸಚಿವರ ಕಚೇರಿಗೆ ಇಲ್ಲ ಮಾಧ್ಯಮದಾಕ್ಕಾದರೂ ಸಾಕ್ಷ್ಯವನ್ನು ಬಿಡುಗಡೆ ಮಾಡಲಿ ಎಂದರು.
ಇದನ್ನೂ ಓದಿ:'ಈ ಹಿಂದೆ ನಮ್ಮ ಶಾಸಕರಿಗೆ 30 ಕೋಟಿ ರೂ, ಮಂಚ ಕೊಟ್ಟಿದ್ದರು.. ಸಚಿವರ ಸಿಡಿ ಹೊರ ಬರಲಿದೆ'