ಶಿವಮೊಗ್ಗ: ಭಾರತೀಯ ಜನತಾ ಪಕ್ಷದ್ದು(ಬಿಜೆಪಿ) ರಾಷ್ಟ್ರಭಕ್ತರ ಸಂಸ್ಕೃತಿ, ಕಾಂಗ್ರೆಸ್ ಪಕ್ಷದವರದ್ದು ಜಿನ್ನಾ ಸಂಸ್ಕೃತಿನಾ? ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಎಂಬ ದೇಶಭಕ್ತಿ ಕಾರ್ಯಕ್ರಮ ನಡೆಸಿದ್ರೆ, ಸಿದ್ದರಾಮಯ್ಯನವರು ವಿರೋಧ ಮಾಡ್ತಾ ಇದ್ದಾರೆ. ಇದು ಸರಿ ಅಲ್ಲ ಎಂದರು. ರಾಜ್ಯದಲ್ಲಿ ಮಳೆ ಇರುವಾಗ ತಿರಂಗಾ ಕಾರ್ಯಕ್ರಮ ಬೇಕಿತ್ತಾ? ಎಂಬ ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಅವರು, ಸಿದ್ದರಾಮೋತ್ಸವ ಆಚರಣೆ ಮಾಡಿಕೊಂಡಾಗ ರಾಜ್ಯದಲ್ಲಿ ಮಳೆ ಇರಲಿಲ್ವಾ, ಆವಾಗ ರಾಜ್ಯ ಸುಭೀಕ್ಷವಾಗಿತ್ತಾ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಮಾತನಾಡಿದರು ಕುಡುಕರ ಪ್ರಶ್ನೆಗೆ ಉತ್ತರಿಸುವುದಿಲ್ಲ: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಆಗುತ್ತದೆ ಎಂದು ಕಾಂಗ್ರೆಸ್ ಪಕ್ಷದವರು ಕನಸು ಕಾಣುತ್ತಿದ್ದಾರೆ. ನಾವು ಹತ್ತು ಸಲ ಹೇಳಿದ್ದೇವೆ. ಸಿಎಂ ಬದಲಾವಣೆ ಮಾಡಲ್ಲ ಎಂದು ಹೇಳಿದ್ದೇವೆ. ಕಾಂಗ್ರೆಸ್ ಪಕ್ಷದವರು ವೀರೇಂದ್ರ ಪಾಟೀಲ್, ಬಂಗಾರಪ್ಪ ಹಾಗೂ ವೀರಪ್ಪ ಮೊಯ್ಲಿ ಅವರನ್ನು ಬದಲಾವಣೆ ಮಾಡಿದ್ರು. ಅದೇ ರೀತಿ ಅಂತ ಬಿಜೆಪಿಯನ್ನು ತಿಳಿದುಕೊಂಡಿದ್ದಾರೆ. ಅವರು ಹಗಲು ಕನಸನ್ನು ಕಾಣುವುದನ್ನು ಬಿಡಬೇಕು ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ಗೆ ಯಾಕೆ ಧಿಕ್ಕಾರ ಕೂಗಿದ್ರು:ತುರ್ತು ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರು ಶ್ರೀಮತಿ ಇಂದಿರಾಗಾಂಧಿ ವಿರುದ್ದ ಧಿಕ್ಕಾರ ಕೂಗಿಲ್ವ ಎಂದು ಹೇಳಲಿ. ತುರ್ತು ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರು ಯಾಕೆ ಜೈಲಿಗೆ ಹೋಗಿದ್ರು ಎಂದು ಹೇಳಲಿ ಎಂದರು. ಹಿಂದೆ ಸಿದ್ದರಾಮಯ್ಯನವರು ದೇವೇಗೌಡರ ಜೊತೆ ವಿರೋಧ ಪಕ್ಷದಲ್ಲಿದ್ದಾಗ ಯಾಕೆ ಧಿಕ್ಕಾರ ಕೂಗಿದ್ರು. ಈಗ ಸೋನಿಯಾ ಗಾಂಧಿ, ಇಂದಿರಾಗಾಂಧಿ ಹಾಗೂ ರಾಹುಲ್ ಗಾಂಧಿಗೆ ಜೈಕಾರ ಹಾಕ್ತಾ ಇದ್ದಾರೆ. ಯಾಕಂದ್ರೆ, ಸಿದ್ದರಾಮಯ್ಯ ಸದಾ ಅಧಿಕಾರದಲ್ಲಿ ಇರಬೇಕು, ಒಂದು ಕಡೆ ವಿರೋಧ ಪಕ್ಷದಲ್ಲಿರಬೇಕು, ಇಲ್ಲವಾದಲ್ಲಿ ಸಿಎಂ ಆಗಿರಬೇಕು ಎಂದು ಈಶ್ವರಪ್ಪ ಕುಟುಕಿದರು.
ಓದಿ:ವಿಶ್ವ ವಿಖ್ಯಾತ ಮೈಸೂರು ದಸರಾಗೆ ಆಗಮಿಸಿದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ