ಕರ್ನಾಟಕ

karnataka

ETV Bharat / state

ಸಿದ್ದರಾಮೋತ್ಸವ ಆಯೋಜನೆಗೆ ಕೆ.ಎಸ್.ಈಶ್ವರಪ್ಪ ವಿರೋಧ.. ಇದೆಂಥಾ ದುಃಸ್ಥಿತಿ ಎಂದು ವ್ಯಂಗ್ಯ - ಸಿದ್ದರಾಮಯ್ಯ

ಎಸಿಬಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು ಎಸಿಬಿಯ ಕ್ಷಮೆಯಾಚಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

Siddaramotsava
ಕೆ.ಎಸ್.ಈಶ್ವರಪ್ಪ

By

Published : Jul 6, 2022, 5:36 PM IST

ಶಿವಮೊಗ್ಗ : ವಿಪಕ್ಷ ನಾಯಕ‌ ಸಿದ್ದರಾಮಯ್ಯ 75 ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ಸಿದ್ದರಾಮೋತ್ಸವ ಎಂಬ ಹೆಸರಲ್ಲಿ ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ಹುಟ್ಟು ಹಬ್ಬವನ್ನು ಮನೆಯವರೊಂದಿಗೆ ಆತ್ಮೀಯರೊಂದಿಗೆ ಆಚರಿಸಿಕೊಳ್ಳೋದು ವಾಡಿಕೆ. ಆದರೆ ಇವರು ಸಾರ್ವಜನಿಕವಾಗಿ ಆಚರಿಸುತ್ತಿರುವುದು ಶಕ್ತಿ ಪ್ರದರ್ಶನಕ್ಕಾಗಿ ಎಂದು ವ್ಯಂಗ್ಯವಾಡಿದರು.

ಸಿದ್ದರಾಮೋತ್ಸವ ಆಯೋಜನೆಗೆ ಕೆ.ಎಸ್.ಈಶ್ವರಪ್ಪ ವಿರೋಧ

ಜಮೀರ್ ಮನೆಯಲ್ಲಿ ಎಸಿಬಿ ರೇಡ್ ವಿಚಾರ:ಎಸಿಬಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು ಎಸಿಬಿಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಜಮೀರ್​ ಅವರ ಮನೆಯಲ್ಲಿ ಕೋಟಿಗಟ್ಟಲೆ ಹಣ, ಬೇನಾಮಿ ಆಸ್ತಿ ಸಿಕ್ಕಿದೆ. ಹೀಗಿರುವಾಗ ಇದು ರಾಜಕೀಯ ಪ್ರೇರಿತ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನ ವಿಚಾರ:ಕಾನೂನು ಬದ್ಧವಾಗಿ ಸಂವಿಧಾನದಲ್ಲಿ ಏನೇನು ಅವಕಾಶವಿದೆ ಅದೆಲ್ಲ ಮಾಡುತ್ತಿದ್ದೇವೆ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದ ಉದಾಹರಣೆ ಈವರೆಗೆ ಇತ್ತಾ ಎಂದು ಪ್ರಶ್ನಿಸಿದರು. ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ತಪ್ಪು ಮಾಡಿದವರನ್ನು ಬಿಜೆಪಿ ಬಿಡಲ್ಲ ಎಂದರು.

ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಧಿಕಾರ ವಿಚಾರ:ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 25ಕ್ಕೂ ಹೆಚ್ಚು ಸ್ಥಾನ ಗಳಿಸುವುದಾಗಿ ಹೇಳಿದ್ದರು. ಬಿಜೆಪಿ 2 ಸ್ಥಾನವೂ ಗೆಲ್ಲೊಲ್ಲ ಅಂದಿದ್ದರು. ಆದರೆ ಫಲಿತಾಂಶ ಉಲ್ಟಾ ಆಯ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಕನಸಿನಲ್ಲೂ ಯೋಚಿಸೋದು ಬೇಡ ಎಂದು ಈಶ್ವರಪ್ಪ ಇದೇ ವೇಳೆ ಟಾಂಗ್​ ನೀಡಿದರು.

ಇದನ್ನೂ ಓದಿ:ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಇಲ್ಲ: ಸಚಿವ ಸೋಮಶೇಖರ್

ABOUT THE AUTHOR

...view details