ಶಿವಮೊಗ್ಗ :ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಜಮೀರ್ ಅಹಮದ್ ಪಾಕಿಸ್ತಾನದ ಪರ ಇರುವ ಜನ ಎಂದು ಸಚಿವ ಕೆ ಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಮೊದಲಿದ್ದಂತೆ ಮಾಡುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳ್ತಾರೆ. ಇದು ದೇಶದ್ರೋಹದ ಹೇಳಿಕೆ.
ಸಿದ್ದರಾಮಯ್ಯ ಗೋಹತ್ಯೆನೂ ಮಾಡ್ತೇವೆ, ಪೂಜೆನೂ ಮಾಡ್ತೇವೆ ಎಂದು ಹೇಳ್ತಾರೆ. ಸಿದ್ದರಾಮಯ್ಯನವರು ಹೇಳಿರುವ ಅಂಶಗಳ ಪರ ಇದ್ದೇವೆ ಎಂದು ಜಮೀರ್ ಅಹಮದ್ ಹೇಳ್ತಾರೆ. ಹಾಗಾಗಿ, ಈ ಮೂರು ಜನ ಪಾಕಿಸ್ತಾನದ ಪರ ಇರುವ ಜನರು ಎಂದು ಗಂಭಿರ ಆರೋಪ ಮಾಡಿದರು.
ಕಾಂಗ್ರೆಸ್ ನಾಯಕರುಗಳ ವಿರುದ್ಧ ಸಚಿವ ಈಶ್ವರಪ್ಪ ಹೇಳಿಕೆ ಹೇಳೋರು ಕೇಳೋರು ಇಲ್ಲದ ಪಕ್ಷ :ಈ ದೇಶದ ಗೋವಿನ ಬಗ್ಗೆ, ದೇಶದ ಭೂಮಿ ಕಾಶ್ಮೀರದ ಬಗ್ಗೆ ಗೌರವವಿಲ್ಲದ ಜನರಿವರು. ಕಾಂಗ್ರೆಸ್ನವರು ಏನು ಬೇಕಾದರೂ ಹೇಳಬಹುದು. ಹೇಳೋರು ಕೇಳೋರು ಇಲ್ಲದ ಪಕ್ಷ ಕಾಂಗ್ರೆಸ್ ಎಂದು ಕಿಡಿ ಕಾರಿದರು.
ನಮಗೆ ಹೇಳೋರು ಕೇಳೋರು ಇದ್ದಾರೆ :ಆದರೆ, ಭಾರತೀಯ ಜನತಾ ಪಕ್ಷಕ್ಕೆ ಹೇಳೋರು ಕೇಳೋರು ಇದ್ದಾರೆ. ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. 16, 17,18ಕ್ಕೆ ರಾಜ್ಯಕ್ಕೆ ಬಂದು ಕ್ಯಾಬಿನೆಟ್ ಮಂತ್ರಿಗಳ ಜತೆ ಸಭೆ ಹಾಗೂ ಕೋರ್ ಕಮಿಟಿ ಸಭೆ ಮಾಡುತ್ತಾರೆ.
ಶಾಸಕರು ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಇದೆ. ಇದು ಭಾರತೀಯ ಜನತಾ ಪಕ್ಷದ ವಿಶೇಷ. ಹೇಳೋರು ಕೇಳೋರು ಇದ್ದಾರೆ ಎನ್ನುವುದಕ್ಕೆ ಅರುಣ್ ಸಿಂಗ್ ಬರುತ್ತಿರುವುದೇ ಸಾಕ್ಷಿ ಎಂದರು. ಪಕ್ಷದಲ್ಲಿ ಕೆಲ ಗೊಂದಲಗಳಿವೆ. ಆದ್ರೆ, ಅರುಣ್ ಸಿಂಗ್ ಬಂದು ಹೋದ ನಂತರ ಎಲ್ಲವೂ ಸರಿಯಾಗುತ್ತದೆ ಎಂದರು.