ಶಿವಮೊಗ್ಗ:ಸೋತವರು ಯಾವತ್ತೂ ತಾನು ಸೋತೆ ಎಂದು ಹೇಳುವುದಿಲ್ಲ. ಶಕ್ತಿಶಾಲಿಗಳು ಹಾಗೂ ಗೆದ್ದವರ ವಿರುದ್ಧ ದೂಷಣೆ ಮಾಡುವುದು ಸ್ವಾಭಾವಿಕ ಎಂದು ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡಿದವರಿಗೆ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ಮಾತನಾಡಿದರು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ಇಂದು ಇಡೀ ಭಾರತದಲ್ಲಿ ಹಿಂದುತ್ವ ಜಾಗೃತಿಯಾಗಿದೆ. ಅದಕ್ಕೆ ಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಹೀಗಾಗಿ, ಹಿಂದುತ್ವದ ಜೊತೆಗೆ ಆರ್‌ಎಸ್‌ಎಸ್ ಟೀಕೆ ಮಾಡುತ್ತಾರೆ ಎಂದರು.
ಇನ್ನು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರಾಮಮಂದಿರ ಆಗಲಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಬಿಜೆಪಿ ಕಾಲದಲ್ಲಿ. ಕಾಶಿಯ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು ಬಿಜೆಪಿ ಕಾಲದಲ್ಲಿ. ಮಥುರಾದಲ್ಲಿ ಸರ್ವೆಗೆ ಅರ್ಜಿ ಸಹ ಹೋಗಿರುವುದು ಬಿಜೆಪಿ ಕಾಲದಲ್ಲಿ. ಇಡೀ ದೇಶದಲ್ಲಿ 36,000 ದೇಗುಲಗಳು ಮಸೀದಿಗಳಾಗಿವೆ. ಅವುಗಳೆಲ್ಲ ಮತ್ತೆ ನಮ್ಮ ಹಿಂದೂಗಳ ಸುಪರ್ದಿಗೆ ಬರಬೇಕು ಎಂಬುದು ನಮ್ಮ ಉದ್ದೇಶ ಎಂದಿದ್ದಾರೆ.
ಆರ್ ಎಸ್ ಎಸ್ ಕುರಿತಂತೆ ಟೀಕೆಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಕ್ತಿಶಾಲಿಗಳ ವಿರುದ್ಧ ಸೋತವರು ಹತಾಷರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ. ಭಾರತದಲ್ಲಿ ಜನಿಸಿ ಇಲ್ಲೇ ಬೆಳೆದು ಇಲ್ಲಿನ ಅನ್ನ, ನೀರು, ಗಾಳಿ ಸೇವಿಸುತ್ತಾ ಜೀವಿಸುತ್ತಿರುವ ಮುಸ್ಲಿಂ ಬಾಂಧವರು ವಂದೇ ಮಾತರಂ ಹೇಳಿದರೆ ಅದನ್ನು ಸ್ವಾಗತಿಸುತ್ತೇನೆ. ಮತ್ತು ಪ್ರೇರಣೆ ಎಂದು ಕರೆಯುತ್ತೇನೆ ಎಂದರು.
ಇನ್ನೂ ರಾಜ್ಯಸಭೆ ಟಿಕೆಟ್- ಅಚ್ಚರಿ ಅಭ್ಯರ್ಥಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಅದು ಕೇಂದ್ರದ ನಾಯಕರ ತೀರ್ಮಾನ. ಅದಕ್ಕೆ ನಾವೆಲ್ಲರೂ ಬದ್ಧ. ಆರ್ ಎಸ್ ಎಸ್ ವಿರುದ್ಧ ಯುಪಿಯಲ್ಲಿ ಸಂಘಟನೆಗಳು ಒಟ್ಟಾಗುತ್ತಿರುವ ವಿಚಾರ. ಮುಸಲ್ಮಾನ ಸಂಘಟನೆ, ಕ್ರಿಶ್ಚಿಯನ್ ಸಂಘಟನೆ ಯಾವುದು ಬೇಕಾದರೂ ಕಟ್ಟಿಕೊಳ್ಳಲಿ ಅಭ್ಯಂತರವಿಲ್ಲ.
ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಈ ಮಣ್ಣನ್ನು ಮಾತೃಭೂಮಿ ಎಂದು ಅವರೆಲ್ಲರೂ ಸ್ವೀಕಾರ ಮಾಡಬೇಕು. ಭಾರತದಲ್ಲಿ ಹುಟ್ಟಿದ್ದೇವೆ, ಇಲ್ಲಿಯಾ ಅನ್ನ ತಿನ್ನುತ್ತಿದ್ದೇವೆ. ಇಲ್ಲಿಯಾ ಗಾಳಿ ಕುಡೀತಾ ಇದ್ದೇವೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾವನೆಯಿಂದ ಭಾರತ್ ಮಾತಾಕೀ ಜೈ.. ಒಂದೇ ಮಾತರಂ ಎಂಬ ಘೋಷಣೆಯನ್ನು ಆ ಸಂಘಟನೆ ಕೂಗಿದರೇ ನಿಜಕ್ಕೂ ಸಂತೋಷ ಎಂದರು.
ಓದಿ:ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ, ಜನತೆ ಆತಂಕ ಪಡುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಶಿ ಅಭಯ