ಶಿವಮೊಗ್ಗ:ಈಗ ನಮ್ಮದೇ ಸರ್ಕಾರ ದೇಶಾದ್ಯಂತ ಅಧಿಕಾರದಲ್ಲಿದೆ. ಹಾಗಾಗಿ ನಮ್ಮ ಒಬ್ಬನೇ ಒಬ್ಬ ಕಾರ್ಯಕರ್ತನ ಮೈ ಮುಟ್ಟಿ ನೋಡಲಿ ಅದರ ಪರಿಣಾಮವೇ ಬೇರೆಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಇಂದು ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಕೇವಲ ಅಧಿಕಾರಕ್ಕೆ ಇರುವ ಪಕ್ಷ ಅಲ್ಲ. ರಾಷ್ಟ್ರೀಯ ವಿಚಾರಧಾರೆ ಹಾಗೂ ಸಿದ್ಧಾಂತವನ್ನು ಹೊಂದಿರುವ ಪಕ್ಷ. ಈ ವಿಷಯವನ್ನು ಜನರಿಗೆ ಮುಟ್ಟಿಸಿ ಅವರ ಮನ ಗೆಲ್ಲಲು ಅಸಂಖ್ಯಾತ ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಒಂದು ಕಾಲಕ್ಕೆ ನಮ್ಮ ಸಂಘಟನೆ ಬಹಳ ದುರ್ಬಲವಾಗಿತ್ತು. ಆಗ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ನಮ್ಮ ಹಿರಿಯರು ಬಿ ಕಾಂ, ಬಿ ಕೂಲ್ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಂದಿದ್ದಾರೆ.