ಕರ್ನಾಟಕ

karnataka

ETV Bharat / state

ಅಂರ್ತಜಲ ಚೇತನ ಯೋಜನೆಗೆ ಚಾಲನೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ - k s eeshwarappa

ಶಿವಮೊಗ್ಗದ ಸೂಗೂರಿನ ಕ್ಯಾತಿನಕೊಪ್ಪ ಗ್ರಾಮದಲ್ಲಿ ಅಂರ್ತಜಲ ಚೇತನ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಗುದ್ದಲಿ ಪೊಜೆ ನಡೆಸಿದರು.

eeshwarappa

By

Published : May 6, 2020, 2:41 PM IST

ಶಿವಮೊಗ್ಗ: ರಾಜ್ಯದಲ್ಲಿ ಅಂರ್ತಜಲ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಯು ಅಂರ್ತಜಲ ಚೇತನ ಕಾರ್ಯವನ್ನು ಶಿವಮೊಗ್ಗದಿಂದ ಪ್ರಾರಂಭಿಸಿದೆ.

ಇಂದು ಶಿವಮೊಗ್ಗದ ಸೂಗೂರಿನ ಕ್ಯಾತಿನಕೊಪ್ಪ ಗ್ರಾಮದಲ್ಲಿ ಅಂರ್ತಜಲ ಚೇತನ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಗುದ್ದಲಿ ಪೊಜೆ ನಡೆಸಿದರು.

ಅಂರ್ತಜಲ ಚೇತನ ಯೋಜನೆಗೆ ಚಾಲನೆ

ಕ್ಯಾತಿನಕೊಪ್ಪ ಗ್ರಾಮದ ಪಂಷಾಕ್ಷರಿ ಅವರ ಜಮೀನಿನ ಪಕ್ಕದ ಸಣ್ಣ ಕಾಲುವೆಯಲ್ಲಿ ನೀರು ಇಂಗುವ ಗುಂಡಿಯನ್ನು ಮಾಡುವ ಮೂಲಕ ಈ ಭಾಗದಲ್ಲಿ ಅಂರ್ತಜಲ ಹೆಚ್ಚಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದೇ ರೀತಿ ಸೂಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಇಂಗು ಗುಂಡಿಯನ್ನು ಮಾಡಲಾಗುತ್ತಿದೆ.

ಜಿಲ್ಲೆಯ ವಿವಿಧೆಡೆ ಇಂಗುಗುಂಡಿಯ ಜೊತೆ, ಚೆಕ್ ಡ್ಯಾಂ ರೂಪದ ತಡೆಗೋಡೆ ನಿರ್ಮಾಣವನ್ನು ವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಗ್ರಾಮೀಣಾಭಿವೃದ್ದಿ ಇಲಾಖೆಗೆ ಆರ್ಟ್ ಆಫ್ ಲಿವಿಂಗ್ ತಾಂತ್ರಿಕ ಸಲಹೆಯನ್ನು ನೀಡುತ್ತಿದೆ.

ABOUT THE AUTHOR

...view details