ಕರ್ನಾಟಕ

karnataka

ETV Bharat / state

'ಡಿಕೆಶಿ, ಸಿದ್ದು ಮೊದ್ಲು ಶಾಸಕರಾಗಿ ಗೆದ್ದು ಬರಲಿ - ಆಮೇಲೆ ಸಿಎಂ ಕನಸು ಕಾಣಲಿ' - ಕಾಂಗ್ರೆಸ್​ ಬಗ್ಗೆ ಈಶ್ವರಪ್ಪ ಟೀಕೆ

ಚುನಾವಣೆಗಳಲ್ಲಿ ಸೋತ್ರೂ ಸಹ ಮುಖ್ಯಮಂತ್ರಿ ಆಗೋ ಕನಸು ಇನ್ನೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಬೀಳ್ತಿದೆ. ಹಾಗಾಗಿ ಈಗ ಇಬ್ಬರು ಮುಖ್ಯಮಂತ್ರಿ ಆಗೋ ಕನಸು ಕಾಣ್ತಿದ್ದಾರೆ. ಮೊದಲು ಶಾಸಕರಾಗಿ ಗೆದ್ದು ಬರಲಿ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಟಾಂಗ್ ನೀಡಿದರು.

k s eashwarappa
ಸಚಿವ ಕೆ ಎಸ್​ ಈಶ್ವರಪ್ಪ

By

Published : Jun 20, 2021, 2:11 PM IST

Updated : Jun 20, 2021, 3:18 PM IST

ಶಿವಮೊಗ್ಗ: ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮೊದಲು ಶಾಸಕರಾಗಿ ಗೆದ್ದು ಬರಲಿ ಆಮೇಲೆ ಮುಖ್ಯಮಂತ್ರಿ ಆಗೋ ಕನಸು ಕಾಣಲಿ ಎಂದು ಸಚಿವ ಕೆ‌.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮೊದಲು ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಗೆದ್ದು ಬರಲಿ ಎಂದು ಟಾಂಗ್ ನೀಡಿದರು.

ಸಚಿವ ಕೆ.ಎಸ್​. ಈಶ್ವರಪ್ಪ

ಕಾಂಗ್ರೆಸ್​ನವರು ಐದು ವರ್ಷ ಹಂಗೋ ಹಿಂಗೋ ಅಧಿಕಾರ ನಡೆಸಿದ್ರು. ನಂತರ ಜನ ಈ ಸರ್ಕಾರ ಬೇಡ ಎಂದು ಅವರನ್ನು ಸೋಲಿಸಿದ್ರು. ಸಿದ್ದರಾಮಯ್ಯನವರು ಸಹ ಚಾಮುಂಡಿ ಕ್ಷೇತ್ರದಲ್ಲಿ ಸೋತ್ರು. ಕಾಂಗ್ರೆಸ್​ನ ಹಲವು ನಾಯಕರು, ಶಾಸಕರು ಸೋತರು ಸಹ ಮುಖ್ಯಮಂತ್ರಿ ಆಗೋ ಕನಸು ಇನ್ನೂ ಅವರಿಗೆ ಬೀಳ್ತಿದೆ. ಹಾಗಾಗಿ ಈಗ ಇಬ್ಬರು ಮುಖ್ಯಮಂತ್ರಿ ಆಗೋ ಕನಸು ಕಾಣ್ತಿದ್ದಾರೆ. ಮೊದಲು ಶಾಸಕರಾಗಿ ಗೆದ್ದು ಬರೋದನ್ನು ನೋಡಿ ಎಂದು ಟಾಂಗ್ ನೀಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ಎನ್ನುವ ಪ್ರಶ್ನೆಯೇ ಇಲ್ಲ. ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರ ನೇತೃತ್ವದಲ್ಲಿ ಆಡಳಿತ ನಡೆಸುತ್ತೇವೆ ಹಾಗೂ ಮುಂದಿನ ಬಾರಿ ಚುನಾವಣೆಯಲ್ಲಿ ಸಹ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಅರುಣ್​ಸಿಂಗ್ ಅವರು ಬರುವ ಮುಂಚೆ ಕೆಲವು ಸಣ್ಣ-ಪುಟ್ಟ ಗೊಂದಲಗಳು ಇತ್ತು. ಅವರು ಬಂದು ಹೋದ ನಂತರ ಯಾವುದೇ ಗೊಂದಲಗಳಿಲ್ಲ. ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದರು.

ಇದನ್ನೂ ಓದಿ:ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ಹುಡುಗಿಯರೊಂದಿಗೆ ಅರೆನಗ್ನ ಡಾನ್ಸ್ ವಿಡಿಯೋ ಪತ್ತೆ!

ರಾಜ್ಯದ ಅಭಿವೃದ್ಧಿ ಹಾಗೂ ಸಂಘಟನೆಯ ಬಗ್ಗೆ ಗಮನಿಸಿ ಎಂದು ಕೇಂದ್ರದಿಂದ ಸೂಚನೆ ಬಂದಿದೆ. ಅದರಂತೆ ನಾವು ಕಾರ್ಯ ನಿರ್ವಹಿಸುತ್ತೇವೆ. ಇನ್ನೂ ವಿಶ್ವನಾಥ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಹೇಳಿಕೆ ಗಮನಿಸಿದ್ದೇವೆ. ರಾಜ್ಯಾಧ್ಯಕ್ಷರು ನೋಟಿಸ್ ನೀಡುವ ತಿರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

Last Updated : Jun 20, 2021, 3:18 PM IST

ABOUT THE AUTHOR

...view details