ಶಿವಮೊಗ್ಗ: ನಮ್ಮ ತಂದೆ ಸುಳ್ಳು ಪ್ರಕರಣದಿಂದ ಮುಕ್ತರಾಗಿರುವುದು ನಮ್ಮ ಕುಟುಂಬಕ್ಕೆ ಸಂತಸ ತಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ತಂದೆ 1989 ರಿಂದ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ನಡೆಸಿದ್ದಾರೆ. ಈಗ ಇಂತಹ ಸುಳ್ಳು ಆರೋಪ ಬಂದಾಗ ಒಂದು ರೀತಿ ಬೇಸರವಾಗಿತ್ತು. ಈಗ ಆರೋಪದಿಂದ ಹೊರ ಬಂದಿರುವುದು ನಮಗೆಲ್ಲ ಸಂತಸ ತಂದಿದೆ ಹೇಳಿದರು.
ಸಂತೋಷ್ ಪಾಟೀಲ ಅವರಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲದೇ ಇದ್ದರೂ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಈಗ ನಮ್ಮ ತಂದೆ ಆರೋಪದಿಂದ ಮುಕ್ತರಾಗಿ ಬಂದಿದ್ದಾರೆ. ಮತ್ತೆ ನಮ್ಮ ತಂದೆ ಮಂತ್ರಿ ಆಗುವುದು ಬಿಜೆಪಿಯ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರುಗಳು ಹಾಗೂ ಆರ್ ಎಸ್ ಎಸ್ ನ ಪ್ರಮುಖರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.