ಕರ್ನಾಟಕ

karnataka

ETV Bharat / state

ಘನತ್ಯಾಜ್ಯ ನಿರ್ವಹಣೆ ಕುರಿತು ಶಿವಮೊಗ್ಗದಲ್ಲಿ ನ್ಯಾ. ಸುಭಾಷ್ ಅಡಿ ಸಭೆ - ರಾಷ್ಟ್ರೀಯ ಹಸಿರು ಪೀಠದ ಆದೇಶಗಳ ಬಗ್ಗೆ ನ್ಯಾ. ಸುಭಾಷ್ ಅಡಿ ಮಾಹಿತಿ

ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‍ಗಳು ಘನತ್ಯಾಜ್ಯ ನಿರ್ವಹಣೆ ಕುರಿತು, ಸಮಗ್ರವಾದ ಬೈಲಾ ಮತ್ತು ಮೈಕ್ರೋ ಪ್ಲಾನ್ ರೂಪಿಸಬೇಕೆಂದು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ನ್ಯಾ. ಸುಭಾಷ್ ಅಡಿ ಸೂಚನೆ ನೀಡಿದರು.

ಘನತ್ಯಾಜ್ಯ ನಿರ್ವಹಣೆ ಕುರಿತು ಶಿವಮೊಗ್ಗದಲ್ಲಿ ಸಭೆ

By

Published : Nov 9, 2019, 8:21 PM IST

ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‍ಗಳು ಘನತ್ಯಾಜ್ಯ ನಿರ್ವಹಣೆ ಕುರಿತು, ಸಮಗ್ರವಾದ ಬೈಲಾ ಮತ್ತು ಮೈಕ್ರೋ ಪ್ಲಾನ್ ರೂಪಿಸಬೇಕೆಂದು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ನ್ಯಾ. ಸುಭಾಷ್ ಅಡಿ ಸೂಚನೆ ನೀಡಿದರು. ಘನತ್ಯಾಜ್ಯ ನಿರ್ವಹಣೆ ಹಾಗೂ ರಾಷ್ಟ್ರೀಯ ಹಸಿರು ಪೀಠದ ಆದೇಶಗಳ ಅನುಷ್ಠಾನದ ಕುರಿತು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಮನೆ ಮನೆಯಿಂದ ಕಸ ಸಂಗ್ರಹಣೆ ಹಾಗೂ ಮೂಲದಲ್ಲಿಯೇ ಹಸಿಕಸ ಮತ್ತು ಒಣಕಸ ಪ್ರತ್ಯೇಕಿಸುವಿಕೆಯನ್ನು, ಶೇಕಡಾ 100ರಷ್ಟು ಕಾನೂನು ಪ್ರಕಾರ ಮಾಡಬೇಕಾಗಿದೆ ಎಂದರು. ಇದಕ್ಕಾಗಿ ಸೂಕ್ತ ಬೈಲಾವನ್ನು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ರೂಪಿಸಬೇಕೆಂದು ಹೇಳಿದರು. ಕಸ ಸಂಗ್ರಹಣೆ ವಾಹನ, ಮಾನವ ಸಂಪನ್ಮೂಲ, ಕಸ ವಿಲೇವಾರಿ ಘಟಕ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಹೊಂದಿರಬೇಕು. ಕಸ ಸಂಗ್ರಹಣಾ ವಾಹನಕ್ಕೆ ಜಿಪಿಎಸ್ ಮತ್ತು ಜಿಯೋ ಫೆನ್ಸಿಂಗ್ ಅಳವಡಿಸಬೇಕು ಎಂದು ಹೇಳಿದರು. ಹಾಗೂ ಪ್ರತಿ ಮನೆಯಲ್ಲಿ ತ್ಯಾಜ್ಯ ಸಂಗ್ರಹಿಸಿರುವ ಕುರಿತು ಖಾತ್ರಿಪಡಿಸಲು ಕಾರ್ಡ್ ಸ್ಕ್ಯಾನಿಂಗ್ ವ್ಯವಸ್ಥೆ ಇರಬೇಕು ಎಂದು ತಿಳಿಸಿದರು.

ಘನತ್ಯಾಜ್ಯ ನಿರ್ವಹಣೆ ಕುರಿತು ಶಿವಮೊಗ್ಗದಲ್ಲಿ ಸಭೆ

ಶಿವಮೊಗ್ಗದಲ್ಲಿ 35 ವಾರ್ಡ್‍ಗಳ ಪೈಕಿ 30 ವಾರ್ಡ್‍ಗಳಲ್ಲಿ ಕಸ ನೇರವಾಗಿ ಸಂಗ್ರಹಿಸಲಾಗುತ್ತಿದ್ದು, 6 ವಾರ್ಡ್‍ಗಳಲ್ಲಿ ಮೂಲದಲ್ಲಿಯೇ ವಿಂಗಡನೆ ಮಾಡಲಾಗುತ್ತಿದೆ ಎಂದರು. ಇನ್ನುಳಿದ ಎಲ್ಲಾ ವಾರ್ಡ್‍ಗಳಲ್ಲಿ ಒಂದುವರೆ ತಿಂಗಳ ಒಳಗಾಗಿ ಮೂಲದಲ್ಲಿಯೇ ಕಸ ವಿಂಗಡನೆ ಮಾಡುವುದಾಗಿ ಅಧಿಕಾರಿಗಳು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

For All Latest Updates

TAGGED:

ABOUT THE AUTHOR

...view details