ಕರ್ನಾಟಕ

karnataka

ETV Bharat / state

ಕೃಷಿ ಸಂಬಂಧಿತ ಸಾಲವನ್ನು ಜೂ.30ರೊಳಗೆ ಪಾವತಿಸಿದ್ರೆ ಬಡ್ಡಿ ಮನ್ನಾ - Shimogga bank latest news

ಕೃಷಿಗೆ ಸಂಬಂಧಿಸಿದಂತೆ ಸಾಲ‌ ಪಡೆದ ರೈತರು ಜೂ.30ರ ಒಳಗಾಗಿ ಅಸಲನ್ನು ಪಾವತಿಸಿ, ಬಡ್ಡಿ ಮನ್ನಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

District cooperative central bank
District cooperative central bank

By

Published : Jun 19, 2020, 7:23 PM IST

ಶಿವಮೊಗ್ಗ:ಕೃಷಿಗೆ ಸಂಬಂಧಿಸಿದಂತೆ ಸಾಲ‌ ಪಡೆದ ರೈತರು ಜೂ.30ರ ಒಳಗಾಗಿ ಅಸಲನ್ನು ಪಾವತಿಸಿ, ಬಡ್ಡಿ ಮನ್ನಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಶಾಖೆಗಳ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಲ ಪಡೆದು 2020ರ ಜನವರಿ ಮಾಸಾಂತ್ಯಕ್ಕೆ ಸುಸ್ತಿಯಾಗುವ ಮಧ್ಯಮಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲನ್ನು 2020ರ ಮಾರ್ಚ್ 31ರೊಳಗಾಗಿ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ, ಬ್ಯಾಂಕುಗಳಿಗೆ ಪೂರ್ತಿಯಾಗಿ ಪಾವತಿಸಿದಲ್ಲಿ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡುವಂತೆ ಈ ಹಿಂದೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ, ದೇಶದಲ್ಲಿ ಕೊರೊನಾ ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ರಾಜ್ಯ ಸರ್ಕಾರದ ರೈತ ಪರವಾದ ಈ ಯೋಜನೆಯನ್ನು 2020ರ ಜೂನ್ 30ರವರೆಗೆ ವಿಸ್ತರಿಸಿದೆ. ಹಾಗಾಗಿ ಯೋಜನೆಯ ಕೊನೆಯ ಅವಕಾಶವನ್ನು ರೈತರು ಸದುಪಯೋಗಿಸಿಕೊಳ್ಳಿ. ನಿಗದಿಪಡಿಸಲಾದ ದಿನಾಂಕದೊಳಗಾಗಿ ಸುಸ್ತಿ ಇರುವ ಮಧ್ಯಮಾವಧಿ ಸಾಲದ ಅಸಲನ್ನು ಮರುಪಾವತಿಸಿ, ಬಡ್ಡಿ ಮನ್ನಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details