ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರಿಗಾಗಿ ಜೂ.24 ರಂದು ಅಂತಿಮ ಶ್ರಮಿಕ್ ರೈಲು ವ್ಯವಸ್ಥೆ: ಕೆ.ಬಿ. ಶಿವಕುಮಾರ್ - Shivmogga DC shivakumar news

ವಲಸೆ ಕಾರ್ಮಿಕರಿಗಾಗಿ ಜೂನ್ 24 ರಂದು ಬೆಂಗಳೂರಿನಿಂದ ಅಂತಿಮವಾಗಿ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಲು ಬಯಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮನವಿ ಮಾಡಿದ್ದಾರೆ.

Shivakumar
Shivakumar

By

Published : Jun 22, 2020, 2:08 PM IST

ಶಿವಮೊಗ್ಗ: ತಮ್ಮ ರಾಜ್ಯಗಳಿಗೆ ತೆರಳಲು ಬಯಸುವ ವಲಸೆ ಕಾರ್ಮಿಕರಿಗಾಗಿ ಜೂನ್ 24 ರಂದು ಬೆಂಗಳೂರಿನಿಂದ ಅಂತಿಮವಾಗಿ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಲು ಬಯಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮನವಿ ಮಾಡಿದ್ದಾರೆ.

ತಮ್ಮ ರಾಜ್ಯಗಳಿಗೆ ತೆರಳಲು ಬಯಸುವ ಅನ್ಯ ರಾಜ್ಯಗಳ ಕಾರ್ಮಿಕರು ಸೇವಾ ಸಿಂಧು ಆ್ಯಪ್‍ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಸೇವಾ ಸಿಂಧುವಿನಲ್ಲಿ ನೋಂದಾಯಿಸಿಕೊಂಡಿರುವ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿರುವ ಸೇವಾ ಕೌಂಟರ್ ನಲ್ಲಿ ಜೂನ್ 23 ರ ಮಧ್ಯಾಹ್ನ 3.30 ಗಂಟೆಯ ಒಳಗಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್, ಮೊಬೈಲ್ ಸಂಖ್ಯೆ- 9845184795 ಅವರನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

For All Latest Updates

ABOUT THE AUTHOR

...view details