ಶಿವಮೊಗ್ಗ: ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರ ಪರ ತೀರ್ಪು ಬರಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುಪ್ರೀಂನಲ್ಲಿ ಅನರ್ಹ ಶಾಸಕರ ಪರ ತೀರ್ಪು ಬರಲಿದೆ: ಈಶ್ವರಪ್ಪ - ಅನರ್ಹ ಶಾಸಕರ ವಿಚಾರಣೆ
ಶಾಸಕ ಸ್ಥಾನ ಕಳೆದುಕೊಂಡು ಅನರ್ಹರಾಗಿರುವ ಶಾಸಕರಿಗೆ ಸುಪ್ರೀಂ ನಿರ್ಧಾರವೇ ರಾಜಕೀಯ ಭವಿಷ್ಯದ ದಾರಿ ತೋರುವಂತದ್ದು, ಈ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅನರ್ಹ ಶಾಸಕರ ಪರಾವಾಗಿಯೇ ತೀರ್ಪು ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಮಾಜಿ ಸ್ವೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್ ರೀತಿ, ಸಿದ್ದರಾಮಯ್ಯ ಕೈಗೊಂಬೆಯಾಗಿ ಈ ಹಿಂದೆ ವರ್ತಿಸಿದ್ದರು. ಶಾಸಕರ ರಾಜೀನಾಮೇ ವಿಚಾರದಲ್ಲಿ ಸ್ಪೀಕರ್ ಅವರು ರಾಜೀನಾಮೆಯನ್ನು ಅಂಗೀಕರಿಸಬೇಕಿತ್ತು, ಇಲ್ಲವೇ ತಿರಸ್ಕರಿಸಬೇಕಿತ್ತು. ಅದರೆ ಅವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಸ್ವೀಕರ್ ನಿರ್ಧಾರವೇ ಸಂವಿಧಾನಕ್ಕೆ ವಿರುದ್ದವಾದುದು ಎಂದರು.
ಒಂದು ವೇಳೆ ತೀರ್ಪು ಅನರ್ಹರ ಪರವಾಗಿ ಬರದಿದ್ದರೆ ಅವರ ಜೊತೆ ಸಮಾಲೋಚಿಸಿಯೇ ಟಿಕೇಟ್ ನೀಡಲು ಚಿಂತನೆ ಮಾಡಲಾಗುವುದು. ಈ ಸರಕಾರ ಬರುವುದಕ್ಕೆ ಪ್ರಮುಖ ಕಾರಣ ಅನರ್ಹ ಶಾಸಕರು. ಉಪ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗೆಲ್ಲುತ್ತೇವೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.