ಶಿವಮೊಗ್ಗ :ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ - ವಾರಾಂತ್ಯ ಸಿನಿ ಸಂಭ್ರಮದಲ್ಲಿ ಮಾರ್ಚ್ 7 ರ ಸಂಜೆ 5.30ಕ್ಕೆ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿ ಚಿತ್ರಮಂದಿರಲ್ಲಿ, ಇಂಗ್ಲಿಷ್ ಭಾಷೆಯ ‘ಜೊಜೊ ರ್ಯಾಬಿಟ್’ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.
2020 ಜನವರಿಯಲ್ಲಿ ತೆರೆಕಂಡ ಈ ಸಿನಿಮಾ, ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಜೊತೆಗೆ ಆಸ್ಕರ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ.