ಕರ್ನಾಟಕ

karnataka

ETV Bharat / state

ಶಿಕಾರಿಪುರದಲ್ಲಿ ರಾಜಕೀಯ ಧ್ರುವೀಕರಣ: ಜೆಡಿಎಸ್​ನ ಬಳಿಗಾರ್ ಶೀಘ್ರ ಬಿಜೆಪಿ ಸೇರ್ಪಡೆ - ಸಿಎಂ ಬಸವರಾಜ ಬೊಮ್ಮಯಿ

ಇಷ್ಟು ವರ್ಷ ಜೆಡಿಎಸ್​ನಲ್ಲಿ ಗುರುತಿಸಿಕೊಂಡಿದ್ದು, ಎಸ್ ಬಂಗಾರಪ್ಪನವರ ಬೆಂಬಲಿಗ ಹಾಗೂ ಕೆಎಎಸ್ ಮಾಜಿ‌ ಅಧಿಕಾರಿ ಹೆಚ್ ಟಿ ಬಳಿಗಾರ್ ಅವರು ಇದೀಗ ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ.

ht balegar
ಹೆಚ್ ಟಿ ಬಳಿಗಾರ್

By

Published : Nov 17, 2022, 11:10 AM IST

ಶಿವಮೊಗ್ಗ: ಎಸ್ ಬಂಗಾರಪ್ಪನವರ ಬೆಂಬಲಿಗರು ಹಾಗೂ ಕೆಎಎಸ್ ಮಾಜಿ‌ ಅಧಿಕಾರಿ ಹೆಚ್ ಟಿ ಬಳಿಗಾರ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ.

ಬಳಿಗಾರ್ ಈ ಮೊದಲು ಜೆಡಿಎಸ್‌ನಲ್ಲಿದ್ದು 2013 ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ 15 ಸಾವಿರ ಮತಗಳಿಸಿದ್ದರು. 2018 ರಲ್ಲಿ ಮತ್ತೆ ಸ್ಪರ್ಧಿಸಿದ್ದು ಸುಮಾರು 13,500 ಮತಗಳನ್ನು ಪಡೆದಿದ್ದರು.‌ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಹಾಗೂ ಮೈತ್ರಿ ಸರ್ಕಾರದಲ್ಲಿ ಬಳಿಗಾರ ಅವರನ್ನು ಗುರುತಿಸುವ ಕಾರ್ಯ‌ ನಡೆಯಲಿಲ್ಲ. ಹೀಗಾಗಿ, ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದರು.

ಮಗನ ಹಾದಿ ಸುಗಮಗೊಳಿಸಿದ ಬಿಎಸ್​ವೈ: ಹೆಚ್ ಟಿ ಬಳಿಗಾರ್ ಬಿಜೆಪಿ ಸೇರ್ಪಡೆಯಿಂದ ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಹಾದಿ ಸುಗಮವಾಗುತ್ತದೆ ಎಂಬ ದೃಷ್ಟಿಯಿಂದ ಇವರನ್ನು ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಇದನ್ನೂ ಓದಿ:ಬಿಜೆಪಿಗೆ ಸೇರ್ಪಡೆ ಆಗ್ತಾರಾ ಮಾಜಿ ಸಚಿವ ವರ್ತೂರು.. ಪರಿಷತ್‌ ಎಲೆಕ್ಷನ್‌ನಲ್ಲಿ ಮತ್ತೆ 'ಪ್ರಕಾಶ'ಮಾನ..

ತರಿಕೆರೆಯಲ್ಲಿ ಸಿಎಂ ಜೊತೆ ಬಳಿಗಾರ್ ಮಾತುಕತೆ: ನ.15 ರಂದು ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ತರಿಕೆರೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಜೊತೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹೆಚ್ ಟಿ ಬಳಿಗಾರ್ ಮಾತುಕತೆ ನಡೆಸಿದ್ದಾರೆ.

ಇಷ್ಟು ವರ್ಷ ಜೆಡಿಎಸ್​ನಲ್ಲಿ ಗುರುತಿಸಿಕೊಂಡು ಬಿಜೆಪಿಯ ಜೊತೆ ಅಂತರ ಕಾಯ್ದುಕೊಂಡಿದ್ದ ಬಳಿಗಾರ್, ಈಗ ಅದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ತಮ್ಮ ಅಭಿಮಾನಿಗಳು, ಕಾರ್ಯಕರ್ತರ ಜೊತೆ ಮಾತುಕತೆ, ಸಭೆ ನಡೆಸಿ ನಂತರ ಬಿಜೆಪಿ ಸೇರ್ಪಡೆಯಾಗುವುದನ್ನು ಖಚಿತಪಡಿಸುವೆ ಎಂದು 'ಈಟಿವಿ ಭಾರತ'ಕ್ಕೆ ಅವರು ತಿಳಿಸಿದರು.

ಇದನ್ನೂ ಓದಿ:ಬಿಜೆಪಿಯಿಂದ ಆಪರೇಷನ್ ಮಂಡ್ಯ, ಕೋಲಾರ, ಉಡುಪಿ, ಮೈಸೂರು: ಬಿಜೆಪಿ ಸೇರಿದ ಕಾಂಗ್ರೆಸ್, ಜೆಡಿಎಸ್ ನಾಯಕರು

ABOUT THE AUTHOR

...view details