ಶಿವಮೊಗ್ಗ: ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕ ಜೆಡಿಎಸ್ ಶಾಸಕರು ಹಾಗೂ ಮಂತ್ರಿಗಳಿಗೆ ಕಾಂಗ್ರೆಸ್ ಸಹವಾಸ ಸಾಕಾಗಿದೆ ಎಂದು ನನ್ನ ಬಳಿ ಹೇಳಿ ಕೊಂಡಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ.
ಕೈ ಸಹವಾಸ ಸಾಕಾಗಿದೆ ಎಂದು ಜೆಡಿಎಸ್ನವರು ನನ್ನ ಬಳಿ ಹೇಳಿಕೊಂಡಿದ್ದಾರೆ: ಈಶ್ವರಪ್ಪ - news kannada
ಸಿಎಂ ಕುಮಾರಸ್ವಾಮಿರವರು ಸಹ ನನ್ನ ಬಳಿ, ನಮಗೆ ಯಾವಾಗ ಕಾಂಗ್ರೆಸ್ನಿಂದ ಮುಕ್ತಿ ಸಿಗುತ್ತದೆಯೋ ಎಂದು ಹಣೆ ಚಚ್ಚಿಕೊಂಡಿದ್ದಾರೆ ಎಂದು ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅನೇಕ ಜೆಡಿಎಸ್ ಶಾಸಕರು ಹಾಗೂ ಮಂತ್ರಿಗಳು ಕಾಂಗ್ರೆಸ್ ಸಹವಾಸ ಸಾಕಾಗಿದೆ ಎಂದು ಹೇಳಿ ಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿರವರು ಸಹ ನನ್ನ ಬಳಿಯಲ್ಲಿ ನಮಗೆ ಯಾವಾಗ ಕಾಂಗ್ರೆಸ್ನಿಂದ ಮುಕ್ತಿ ಸಿಗುತ್ತದೆಯೋ ಎಂದು ಹಣೆ ಚಚ್ಚಿಕೊಂಡಿದ್ದಾರೆ. ಈ ಕುರಿತು ನೀವು ಪ್ರಶ್ನೆ ಮಾಡಿದ್ರೆ ಅವರು ಏನೂ ಉತ್ತರ ಕೊಡೋದಿಲ್ಲ. ನಾನು ಹಾಗೆಯೇ ಹೇಳಿಲ್ಲ ಎಂದು ಹೇಳಬಹುದು. ಆದ್ರೆ ಎಲ್ಲಾರಿಗೂ ಒಂದು ಮನಃಸಾಕ್ಷಿ ಇರುತ್ತದೆ ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ಸಣ್ಣ ನೀರಾವರಿ ಸಚಿವ ಪುಟ್ಟರಾಜು ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ಕಾಂಗ್ರೆಸ್ನವರಷ್ಟು ಕಾಟ ಯಾರೂ ಕೂಡಲಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅತೃಪ್ತ ಶಾಸಕರು ಮುಂಬೈನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಾವು ಆಪರೇಷನ್ ಕಮಲಕ್ಕೆ ಸಿಲುಕಿಲ್ಲ ಅಂತ ಕೂಡ ಹೇಳಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಮಾಡಿದ್ದ ಆರೋಪ ತಪ್ಪು. ಹೀಗಾಗಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.