ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ದೇವಗೌಡರ ಕುಟುಂಬ ಆಡಳಿತ ಅಂತ್ಯವಾಗುವ ಜೊತೆಗೆ ಜೆಡಿಎಸ್ ಪಕ್ಷವು ಅಂತ್ಯವಾಗುತ್ತದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಜೆಡಿಎಸ್ ಕುಟುಂಬ ರಾಜಕಾರಣ ಅಂತ್ಯ: ಬಿ.ಜೆ ಪುಟ್ಟಸ್ವಾಮಿ ಭವಿಷ್ಯ - ಜೆಡಿಎಸ್
ರಾಜ್ಯದಲ್ಲಿ ಜೆಡಿಎಸ್ ಕುಟುಂಬ ರಾಜಕಾರಣ ಅಂತ್ಯವಾಗಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ರಾಜ್ಯದ ಕೆಲವು ಜಿಲ್ಲೆಗಳನ್ನು ದೇವೇಗೌಡರ ಫ್ಯಾಮಿಲಿ ಸಂಸ್ಥಾನ ಮಾಡಿಕೊಳ್ಳಲು ಹೊರಟಿದೆ. ಹಿಂದೆ ರಾಜಮನೆತನಗಳ ಆಡಳಿತವಿದ್ದಾಗ ಸಂಸ್ಥಾನಗಳನ್ನ ಕುಟುಂಬದ ಸದಸ್ಯರು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅದೇ ರೀತಿ ಈಗ ದೇವೇಗೌಡರು ಮಾಡಲು ಹೊರಟಿದ್ದು,
ಹಾಸನಕ್ಕೆ ಪ್ರಜ್ವಲ್ ರೇವಣ್ಣ,ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿಗೆ ಹಾಗೂ ತುಮಕೂರನ್ನು ಮುಂದಿನ ದಿನಗಳಲ್ಲಿ ಬಾಲಕೃಷ್ಣರಿಗೆ ಬಿಟ್ಟು ಕೊಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹಿಂದುಳಿದ ವರ್ಗ ಈ ಬಾರಿ ಬಿಜೆಪಿ ಪರವಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಹೆಚ್ಚಿನ ಮತಗಳ ಅಂತರದಲ್ಲಿ ಬಿ.ವೈ ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಗಳಾಗಿದ್ದಾಗ ಹಿಂದೂಳಿದ ವರ್ಗಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರು ಎಂದರು.