ಕರ್ನಾಟಕ

karnataka

ETV Bharat / state

ಮರಾಠ ಪ್ರಾಧಿಕಾರ ರಚನೆ ಕೈ ಬಿಡಬೇಕು.. ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಮನವಿ - ಜಯ ಕರ್ನಾಟಕ ಸಂಘಟನೆ

ಸರ್ಕಾರ ಪ್ರಾಧಿಕಾರಗಳನ್ನು ರಚಿಸುವುದಾದ್ರೆ ಬಡವರ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ನಿಗಮ ಸ್ಥಾಪಿಸಲಿ, ಅದರ ಹೊರತು ಜಾತಿಗೊಂದು ನಿಗಮವಲ್ಲ ಎಂದು ಒತ್ತಾಯಿಸಿದರು..

Jaya Karnataka Organization appeals
ಮರಾಠ ಪ್ರಾಧಿಕಾರ ರಚನೆ ಕೈ ಬಿಡಬೇಕು: ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಮನವಿ

By

Published : Dec 5, 2020, 2:05 PM IST

ಶಿವಮೊಗ್ಗ :ಕರ್ನಾಟಕ ಬಂದ್​ಗೆ ಬೆಂಬಲಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಮರಾಠ ಪ್ರಾಧಿಕಾರ ರಚನೆ ಬೇಡ. ಇದನ್ನ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮರಾಠ ಪ್ರಾಧಿಕಾರ ರಚನೆ ಕೈ ಬಿಡಬೇಕು : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಮನವಿ

ನಗರದಲ್ಲಿ 144 ನಿಷೇಧಾಜ್ಞೆ ಜಾರಿ ಇರುವ ಹಿನ್ನೆಲೆ ಪ್ರತಿಭಟನೆ ಮಾಡಲು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮುಂದಾಗಲಿಲ್ಲ. ಜಿಲ್ಲಾಧಿಕಾರಿಗಳ ಮೂಲಕ ಯಾವುದೇ ಕಾರಣಕ್ಕೂ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬಾರದು.

ಸರ್ಕಾರ ಪ್ರಾಧಿಕಾರಗಳನ್ನು ರಚಿಸುವುದಾದ್ರೆ ಬಡವರ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ನಿಗಮ ಸ್ಥಾಪಿಸಲಿ, ಅದರ ಹೊರತು ಜಾತಿಗೊಂದು ನಿಗಮವಲ್ಲ ಎಂದು ಒತ್ತಾಯಿಸಿದರು.

ಕನ್ನಡಿಗರ ನೆಲ, ಜಲ, ಭಾಷೆಯ ಉಳಿವಿಗಾಗಿ ಹೋರಾಡುತ್ತಿರುವ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details