ಶಿವಮೊಗ್ಗ: ಹಾಲಿ ಶೈಕ್ಷಣಿಕ ವರ್ಷದಿಂದ ಐಟಿಐ ಕಾಲೇಜಿನ ಪರೀಕ್ಷೆಯನ್ನು ಆನ್ಲೈನ್ಮಾಡುತ್ತಿರುವುದನ್ನು ಖಂಡಿಸಿ ಎನ್ಎಸ್ಯುಐ ಸಂಘಟನೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.
ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ ಕೇಂದ್ರ ಸರ್ಕಾರ ಐಟಿಐ ಪರೀಕ್ಷೆಯನ್ನು ಆನ್ಲೈನ್ ಮಾಡಿರುವುದು ಖಂಡನೀಯ, ತಕ್ಷಣ ಕೇಂದ್ರ ಸರ್ಕಾರ ಆನ್ಲೈನ್ ಪರೀಕ್ಷೆಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಲಾಯಿತು.
ಕೇಂದ್ರ ಸರ್ಕಾರ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ಐಟಿಐಗೆ ಆನ್ಲೈನ್ಪರೀಕ್ಷೆ ತಂದಿದೆ. ಐಟಿಐಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳೆ ಹೆಚ್ಚು ಪ್ರವೇಶ ಪಡೆಯುತ್ತಾರೆ. ಇವರಿಗೆ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಪರೀಕ್ಷೆಗೆ ಕಳುಹಿಸಿದರೆ ವಿದ್ಯಾರ್ಥಿಗಳು ಫೇಲ್ ಆಗುವ ಸಾಧ್ಯತೆಗಳೆ ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಈ ಬಗ್ಗೆ ಏನೂ ಗೂತ್ತಿಲ್ಲದ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ಮುಂದೆ ಕೂರಿಸಿ ಪರೀಕ್ಷೆ ಬರೆಯಿಸಿ ಎಂದರೆ ಕಷ್ಟವಾಗುತ್ತದೆ. ಮೊದಲು ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ ಎದುರಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಐಟಿಐ ವಿದ್ಯಾರ್ಥಿಗಳು ಭಾಗಿಯಾಗಿದ್ದರು.