ಕರ್ನಾಟಕ

karnataka

ETV Bharat / state

ನಾನ್‌ ಯಾವ ಕಾರಣಕ್ಕೂ ಡಿಸಿಎಂ ಆಗಲ್ಲ.. ಅಪೇಕ್ಷೆ ಪಡೋದೆ ತಪ್ಪು.. ಸಚಿವ ಕೆಎಸ್‌ಈ - ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ

ನೀವು ಡಿಸಿಎಂ ಹುದ್ದೆಯ ಆಕಾಂಕ್ಷಿಗಳಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಕಾರಣಕ್ಕೂ ಮತ್ತೆ ಡಿಸಿಎಂ‌ ಆಗುವುದಿಲ್ಲ. ಅನೇಕರು ಈ ಹುದ್ದೆ ಬಯಸಿದ್ದಾರೆ. ಜೊತೆಗೆ ನಾನು ಈ ಮೊದಲೇ ಡಿಸಿಎಂ ಆಗಿದ್ದೇನೆ. ಹಾಗಾಗಿ ಯಾವುದೇ ಕಾರಣಕ್ಕೂ ಡಿಸಿಎಂ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.

ks-eshwarappa
ಕೆ.ಎಸ್.ಈಶ್ವರಪ್ಪ

By

Published : Jan 8, 2020, 3:12 PM IST

ಶಿವಮೊಗ್ಗ:ಪೌರತ್ವ ವಿಷಯದಲ್ಲಿ ಚರ್ಚೆ ನಡೆಯಲಿ. ಆದರೆ, ಈ ವಿಷಯದಲ್ಲಿ ಯಾವುದೇ ಒಂದು ಸಮುದಾಯವನ್ನ ವೈಯಕ್ತಿಕವಾಗಿ ಗುರಿಯಾಗಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. ಇದರಿಂದಾಗಿ ಪ್ರಜಾಪ್ರಭುತ್ವದ ಆರೋಗ್ಯ ಹಾಳಾಗುತ್ತೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಿಎಎ ಈಗಾಗಲೇ ಲೋಕಸಭಾ, ರಾಜ್ಯಸಭಾದಲ್ಲಿ ಅನುಮೋದನೆ ಪಡೆದು ರಾಷ್ಟ್ರಪತಿ ಅಂಕಿತ ಬಿದ್ದಿದೆ. ಈಗ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಭಾರತ ಬಂದ್ ಸಹ ಸಿಎಎ ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಒಂದು ಪ್ರಯತ್ನ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ..

ನೀವು ಡಿಸಿಎಂ ಹುದ್ದೆಯ ಆಕಾಂಕ್ಷಿಗಳಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಕಾರಣಕ್ಕೂ ಮತ್ತೆ ಡಿಸಿಎಂ‌ ಆಗುವುದಿಲ್ಲ. ಅನೇಕರು ಈ ಹುದ್ದೆ ಬಯಸಿದ್ದಾರೆ. ಜೊತೆಗೆ ನಾನು ಈ ಮೊದಲೇ ಡಿಸಿಎಂ ಆಗಿದ್ದೇನೆ. ಹಾಗಾಗಿ ಯಾವುದೇ ಕಾರಣಕ್ಕೂ ಡಿಸಿಎಂ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಯಿಂದ ಕೆಲ ಶಾಸಕರು ಹೊರಬರಲಿದ್ದಾರೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿದ ಅವರು, ಅವರು ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ನಮಗೆ ಈಗಾಗಲೇ ಶಾಸಕರು ಹೆಚ್ಚಾಗಿ ಓವರ್ ಲೋಡ್ ಆಗಿದ್ದಾರೆ. ನಮ್ಮ ಎಲ್ಲಾ ಶಾಸಕರು ಹುಲಿಗಳಿದ್ದಂತೆ. ಅವರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದರು.

For All Latest Updates

TAGGED:

ABOUT THE AUTHOR

...view details