ಶಿವಮೊಗ್ಗ:ಸಾಲ ನೀಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶವಲ್ಲ. ಬದಲಿಗೆ ಪ್ರಗತಿಯೇ ನಮ್ಮ ಮೂಲ ಗುರಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
'ಸಾಲ ನೀಡುವುದು ನಮ್ಮ ಉದ್ದೇಶವಲ್ಲ, ಪ್ರಗತಿಯೇ ನಮ್ಮ ಮೂಲ ಗುರಿ' - ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ
ಸಾಲ ನೀಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶವಲ್ಲ. ಬದಲಿಗೆ ಪ್ರಗತಿಯೇ ನಮ್ಮ ಮೂಲ ಗುರಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನೂತನ ಜಿಲ್ಲಾ ಕಚೇರಿ ಉದ್ಘಾಟನೆ
ವಿದ್ಯಾನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನೂತನ ಜಿಲ್ಲಾ ಕಚೇರಿ ಚೈತನ್ಯ ಸೌಧ ಉದ್ಘಾಟನೆ ಹಾಗೂ ಯಂತ್ರಶ್ರೀ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ , ಶಿಕ್ಷಣ ಹಾಗೂ ವ್ಯಕ್ತಿಯ ಬದಲಾವಣೆ ನಮ್ಮ ಉದ್ದೇಶ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿದ ಮೇಲೆ ಮಹಿಳೆಯರಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಾಗಿದೆ. ಜೊತೆಗೆ ಉಳಿತಾಯ ಮಾಡುವ ಮನೋಭಾವವೂ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.