ಶಿವಮೊಗ್ಗ:ನನಗೆ ಮುಜುಗರ ಆಗಿದ್ದಕ್ಕಿಂತ ಹೆಚ್ಚಾಗಿ, ನೋವಾಗಿರೋದು ಸಂತೋಷ್ ಪತ್ನಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾದರು ಅನ್ನೋದು. ಆ ನೋವು ನನಗೆ ತುಂಬಾ ಇದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಖುಲಾಸೆ ಆಗಿದ್ದಾರೆ. ಹೀಗಾಗಿ ಕಾರ್ಯಕರ್ತರು ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಆವರಣದಲ್ಲಿ ಸತ್ಯಕ್ಕೆ ಸಂದ ಜಯ ಎಂಬ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಈ ವೇಳೆ ಮಾತನಾಡಿದ ಅವರು ರಾಜಕಾರಣದಲ್ಲಿ ಮುಜುಗರಗಳು ಸಹಿಸಿಕೊಳ್ಳಬಹುದು. ಆದರೆ ಆ ಹೆಣ್ಣು ಮಗಳು ಚಿಕ್ಕ ವಯಸ್ಸಿನಲ್ಲೇ ವಿಧೆವೆಯಾದರು. ಆ ದೇವರು ಹೇಗೆ ಅವರ ನೋವನ್ನ ನಿವಾರಿಸುತ್ತಾನೋ ಗೊತ್ತಿಲ್ಲ ಎಂದರು.
ನೀವು ಬೇಗ ಆರೋಪದಿಂದ ಮುಕ್ತರಾಗುತ್ತೀರಾ ಎಂದು ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ನಾಯಕರೇ ಕರೆ ಮಾಡಿ ಹೇಳುತ್ತಿದ್ದರು. ದೇವರ ದಯೆ, ಕಾರ್ಯಕರ್ತರ ಹಾರೈಕೆ, ಹಿರಿಯರ ಆಶೀರ್ವಾದದಿಂದ ನಾನು ಆರೋಪ ಮುಕ್ತನಾಗಿದ್ದೇನೆ. ಆರೋಪಗಳನ್ನು ಮಾಡುವ ಮೊದಲು ಯೋಚನೆ ಮಾಡಿ ಆರೋಪಗಳನ್ನು ಮಾಡಬೇಕು. ಈ ಪಕ್ಷಕ್ಕೆ, ದೇಶಕ್ಕೆ ಕಾರ್ಯಕರ್ತರಿಗಾಗಿ ಇಡೀ ಜೀವನ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಶೀಘ್ರದಲ್ಲೇ ಮಿನಿ ಸಂಪುಟ ವಿಸ್ತರಣೆ: ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೇರ್ಪಡೆ ಸಾಧ್ಯತೆ?