ಕರ್ನಾಟಕ

karnataka

ETV Bharat / state

ಆರ್ಥಿಕ ವರ್ಷಾಂತ್ಯದಲ್ಲಿ ಐಟಿ ದಾಳಿ ಮಾಮೂಲಿ, ರಾಜಕೀಯ ಬೇಡ: ಕುಮಾರ್​ ಬಂಗಾರಪ್ಪ - ಶಿವಮೊಗ್ಗ

ಆರ್ಥಿಕ ವರ್ಷಾಂತ್ಯದಲ್ಲಿ ಐಟಿ ದಾಳಿಯೂ ಮಾಮೂಲಿ ಹಾಗಾಗಿ ಇದನ್ನು ರಾಜಕೀಯ ಎನ್ನುವುದು ಬೇಡ ಎಂದು ಶಿವಮೊಗ್ಗದಲ್ಲಿ ಶಾಸಕ ಕುಮಾರ್​ ಬಂಗಾರಪ್ಪ ಹೇಳಿದ್ದಾರೆ.

ಶಾಸಕ ಕುಮಾರ್​ ಬಂಗಾರಪ್ಪ

By

Published : Mar 28, 2019, 7:06 PM IST

ಶಿವಮೊಗ್ಗ:ಐಟಿ ದಾಳಿಯನ್ನು ಸ್ವಾಗತಿಸಿರುವ ಶಾಸಕ ಕುಮಾರ್​ ಬಂಗಾರಪ್ಪ ಜನಪ್ರತಿನಿಧಿಗಳಾಗಿ ಇಂತಹ ಕಾರ್ಯಗಳಿಗೆ ಸಂಪೂರ್ಣವಾಗಿ ಬೆಂಬಲಿಸಬೇಕು ಎಂದಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆರ್ಥಿಕ ವರ್ಷಾಂತ್ಯದಲ್ಲಿ ಈ ಪ್ರಕ್ರಿಯೆ ಮಾಮೂಲಿ, ಹಾಗಾಗಿ ಇದರಲ್ಲಿ ರಾಜಕೀಯ ಮಾಡುವುದು ಬೇಡ. ಐಟಿ ಅಧಿಕಾರಿಗಳು ಅವರ ಕೆಲಸವನ್ನು ಅವರು ಮಾಡಿದ್ದಾರೆ. ಹಾಗೆಯೇ ಚುನಾವಣಾ ಅಧಿಕಾರಿಗಳು ಚುನಾವಣೆ ನಡೆಸುತ್ತಾರೆ. ಇದು ಸಾರ್ವತ್ರಿಕವಾದ ಜವಾಬ್ದಾರಿಯಾಗಿದ್ದು, ಇಲಾಖೆಯ ಕ್ರಮವನ್ನು ಸ್ವಾಗತಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಶಾಸಕ ಕುಮಾರ್​ ಬಂಗಾರಪ್ಪ

ಐಟಿ ದಾಳಿ ಕುರಿತುಮುಖ್ಯಮಂತ್ರಿಗಳಿಗೆ ಮುಂಚಿತವಾಗಿ ಗೊತ್ತಿತ್ತು ಎಂಬ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ. ಕುಮಾರಸ್ವಾಮಿಯವರು ರಾಜ್ಯದ ಬರಗಾಲ ಪರಿಸ್ಥಿತಿ ಬಗ್ಗೆ ಮಾತನಾಡದೆ ಜೋಡೆತ್ತು ಬಗ್ಗೆ ಹೇಳಿಕೆ ನೀಡುವುದು ಸಮಂಜಸವಲ್ಲ. ಮುಖ್ಯಮಂತ್ರಿಗಳು ವೈಯಕ್ತಿಕ ದ್ವೇಷವನ್ನು ಸಾಧಿಸುವ ಮೂಲಕ ಚುನಾವಣೆ ಮಾಡಲು ಹೋರಟಿದ್ದಾರೆ ಎಂದು ಆರೋಪಿಸಿದರು.

For All Latest Updates

ABOUT THE AUTHOR

...view details