ಶಿವಮೊಗ್ಗ :ಸಚಿವ ಕೆ.ಎಸ್.ಈಶ್ವರಪ್ಪನವರ ಪುತ್ರ ಜಿಲ್ಲಾ ಪಂಚಾಯತ್ ಸದಸ್ಯ ಕೆ ಈ ಕಾಂತೇಶ್ ಅವರು, ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ನಗರದ ಮೈಲಾರೇಶ್ವರ ಸಮುದಾಯ ಭವನದಲ್ಲಿ ಸಾಮಗಾನ ವೇದಿಕೆ ವತಿಯಿಂದ ಸರಳ ಕಾರ್ಯಕ್ರಮ ನಡೆಸಲಾಯಿತು. ಚಿತ್ರದುರ್ಗದ ಮಾದಾರ ಪೀಠದ ಮಾದಾರ ಚೆನ್ನಯ್ಯ ಸ್ವಾಮಿಜೀಗಳ ನೇತೃತ್ವದಲ್ಲಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಪೌರ ಕಾರ್ಮಿಕರರು ಹಾಗೂ ಶ್ರೀಗಳ ಜತೆಗೆ ಊಟ ಮಾಡಿದ ಈಶ್ವರಪ್ಪ ಪುತ್ರ ಕಾಂತೇಶ್ ನಗರದ ಮೈಲಾರೇಶ್ವರ ಸಮುದಾಯ ಭವನದಲ್ಲಿ ಶಿವಮೊಗ್ಗದ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸನ್ಮಾನ ನಡೆಸಲಾಯಿತು. ಪೌರ ಕಾರ್ಮಿಕರಿಗೆ ಹಾರ, ಶಾಲು ಹಾಗೂ ಫಲಗಳನ್ನು ನೀಡಿ ಸನ್ಮಾನ ಮಾಡಲಾಯಿತು. ಮಾದಾರ ಚೆನ್ನಯ್ಯನವರು ಹಾಗೂ ಕಾಂತೇಶ್ ಪೌರ ಕಾರ್ಮಿಕರಿಗೆ ಊಟ ಬಡಿಸಿ, ಬಳಿಕ ಅವರ ಜೊತೆ ಕುಳಿತು ಊಟ ಮಾಡಿದರು.
ಓದಿ:ಶಿವಮೊಗ್ಗದಲ್ಲಿ ಶಿಯಾ ವಾಸೀಂ ವಿರುದ್ಧ ಪ್ರತಿಭಟನೆ: ಪ್ರತಿಕೃತಿ ದಹಿಸಿ ಆಕ್ರೋಶ
ಈ ವೇಳೆ ಮಾತನಾಡಿದ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೆಲವರು ತಮ್ಮ ಹುಟ್ಟುಹಬ್ಬವನ್ನು ಜನರು ನೋಡಲೆಂದು ಆಚರಿಸಿಕೊಳ್ಳುತ್ತಾರೆ. ಆದರೆ, ಕಾಂತೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ನಗರವನ್ನು ಸ್ವಚ್ಛಗೊಳಿಸುವ, ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವ ಪೌರ ಕಾರ್ಮಿಕರ ಜೊತೆ ಆಚರಿಸಿಕೊಳ್ಳುವ ಮೂಲಕ ಸರಳತೆ ಮೆರೆದಿದ್ದಾರೆ. ಕಾಂತೇಶ್ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.