ಶಿವಮೊಗ್ಗ: ಭಾರತೀಯ ಜನತಾ ಪಕ್ಷ ಸಂಸ್ಥಾಪನಾ ದಿನದ ಹಿನ್ನೆಲೆ ಬಿಜೆಪಿಯು ದಿನಾಚರಣೆ ಆಚರಿಸಿದೆ. ಬಿಜೆಪಿಯ ಎಲ್ಲಾ ಮುಖಂಡರು ತಮ್ಮ ತಮ್ಮ ಮನೆಯ ಮೇಲೆ ಕಮಲದ ಬಾವುಟ ಹಾರಿಸಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನ: ಮನೆ ಮೇಲೆ ಬಾವುಟ ಹಾರಿಸಿದ ಸಚಿವ ಈಶ್ವರಪ್ಪ - bjp founding day
ಇಂದು ಬಿಜೆಪಿ ಸಂಸ್ಥಾಪನಾ ದಿನಾ ಹಿನ್ನೆಲೆ ಬಿಜೆಪಿ ನಾಯಕರು ತಮ್ಮ ನಿವಾಸದ ಮೇಲೆ ಕಮಲ ಬಾವುಟ ಹಾರಿಸಿ ಸಂಭ್ರಮಿಸಿದ್ದಾರೆ. ಶಿವಮೊಗ್ಗದ ನಿವಾಸದಲ್ಲಿ ಸಚಿವ ಈಶ್ವರಪ್ಪ, ಸಾಗರ ತಾಲೂಕು ಬಿಜೆಪಿಯ ಕಚೇರಿಯಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಕಮಲದ ಬಾವುಟ ಹಾರಿಸಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನ: ಮನೆಯ ಮೇಲೆ ಬಾವುಟ ಹಾರಿಸಿದ ಸಚಿವ ಈಶ್ವರಪ್ಪ
ಇನ್ನು ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ತಮ್ಮ ಮನೆಯ ಮೇಲೆ ಬಿಜೆಪಿ ಬಾವುಟವನ್ನು ಹಾರಿಸಿದ್ದಾರೆ. ಅದೇ ರೀತಿ ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಸೇರಿದಂತೆ ಹಲವು ಪ್ರಮುಖರು ತಮ್ಮ ತಮ್ಮ ಮನೆಯ ಮೇಲೆ ಬಿಜೆಪಿ ಬಾವುಟ ಹಾರಿಸಿದ್ದಾರೆ. ಸಾಗರ ತಾಲೂಕು ಬಿಜೆಪಿಯ ಕಚೇರಿಯಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪಂಡಿತ್ ದೀನ್ ದಿಯಾಳ್ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.