ಕರ್ನಾಟಕ

karnataka

ETV Bharat / state

ಐಪಿಎಸ್ ಅಧಿಕಾರಿ ಭೀಮಾಶಂಕರ್​​​ ತೆರಳುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ - CID SP Bhimashankar Guled car news

ಐಪಿಎಸ್ ಅಧಿಕಾರಿ ಭೀಮಾಶಂಕರ್​​​ ಗುಳೇದ್ ತೆರಳುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ
ಐಪಿಎಸ್ ಅಧಿಕಾರಿ ಭೀಮಾಶಂಕರ್​​​ ಗುಳೇದ್ ತೆರಳುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ

By

Published : Dec 8, 2020, 9:02 AM IST

Updated : Dec 8, 2020, 9:44 AM IST

08:54 December 08

ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಹಿನ್ನೆಲೆ ಹೆಚ್ಚುವರಿ ಕರ್ತವ್ಯಕ್ಕಾಗಿ ಎಸ್​ಪಿ ಗುಳೇದ್ ಅವರು ಬೆಳ್ಳಂಬೆಳಗ್ಗೆ ನಗರ ಸಂಚಾರಕ್ಕೆ ಬಂದಾಗ, ಗಂಡ-ಹೆಂಡತಿ ಹಾಗೂ ಮಗು ಇದ್ದ ಬೈಕ್​ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ.

ಶಿವಮೊಗ್ಗ:ಐಪಿಎಸ್​​​ ಅಧಿಕಾರಿ ಎಸ್​ಪಿ ಭೀಮಾಶಂಕರ್​ ಗುಳೇದ್​​ ಅವರ ಕಾರಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಆಲ್ಕೋಳ ಸರ್ಕಲ್ ಬಳಿ ನಡೆದಿದೆ.

ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಹಿನ್ನೆಲೆ ಹೆಚ್ಚುವರಿ ಕರ್ತವ್ಯಕ್ಕಾಗಿ ಗುಳೇದ್ ಅವರು ಬೆಳ್ಳಂಬೆಳಗ್ಗೆ ನಗರ ಸಂಚಾರಕ್ಕೆ ಬಂದಾಗ, ಗಂಡ-ಹೆಂಡತಿ ಹಾಗೂ ಮಗು ಇದ್ದ ಬೈಕ್​ ಕಾರಿಗೆ ಡಿಕ್ಕಿ ಹೊಡೆದಿದೆ.

ಇದನ್ನು ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಇಂದು ಬೆಳಗ್ಗೆ ಸ್ವಲ್ಪ ಕತ್ತಲಿದ್ದ ಕಾರಣ ಗಾಡಿ ಸವಾರ ವೃತ್ತದಲ್ಲಿ ಏಕಾಏಕಿ ನುಗ್ಗಿದ ಪರಿಣಾಮ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ‌. ಗಾಯಾಳುಗಳನ್ನು ಜಿಲ್ಲಾ ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಕಾರಿನಲ್ಲಿದ್ದ ಎಸ್ಪಿ ಗುಳೇದ್ ಅವರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಸ್ಥಳಕ್ಕೆ ಎಸ್ಪಿ ಶಾಂತರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 8, 2020, 9:44 AM IST

ABOUT THE AUTHOR

...view details