ಶಿವಮೊಗ್ಗ:ಭಾರತೀಯ ಸಂಪ್ರದಾಯದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನಮಾನವಿದೆ. ವರ್ಷದ ಕೊನೆಯಲ್ಲಿ ಆಚರಿಸುವ ಈ ಹಬ್ಬದ ವಿಶೇಷತೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ಅಂಶಗಳು ಮತ್ತು ಆಚರಣೆಯ ವಿಧಾನವನ್ನು ಸಂತೋಷ ಭಾರದ್ವಾಜ ಗುರೂಜಿ ತಿಳಿಸಿದ್ದಾರೆ.
ದೀಪಾವಳಿ ತ್ರಯೋದಶಿಯಿಂದ ಪ್ರಾರಂಭವಾಗುತ್ತದೆ. ಶನಿವಾರ ತ್ರಯೋದಶಿ ಇದೆ. ಇದಕ್ಕೆ ಧನ ತ್ರಯೋದಶಿ ಎಂದೂ ಕರೆಯುವರು. ಧನ ತ್ರಯೋದಶಿಯಲ್ಲಿ ಬಂಗಾರ ಖರೀದಿ ಮಾಡಿ ಮನೆಗೆ ತರುವಂತಹದ್ದು ಶಾಸ್ತ್ರದಲ್ಲಿದೆ. ನಂತರ ಶನಿವಾರವೇ ಚರ್ತುದಶಿ ಚಂದ್ರೋದಯ ಸಂಜೆ 4:50ಕ್ಕೆ ಇರುವುದರಿಂದ ಚರ್ತುದಶಿಯಂದು ಅಭ್ಯಂಗ ಸ್ಥಾನ ಮಾಡಬೇಕು. ಲಕ್ಷ್ಮೀ ಪೂಜೆಯನ್ನು ಭಾನುವಾರ ಸಂಜೆ 4 ಗಂಟೆಯಿಂದ 7:30ರೊಳಗೆ ಮಾಡಬೇಕು. ಅಶ್ವಿಜ ಅಮಾವಾಸ್ಯೆ ಪ್ರದೋಶಕ ಕಾಲದಲ್ಲಿ ಲಕ್ಷ್ಮೀ ಆರಾಧನೆನ್ನು ಕಾಲವನ್ನು ಮಾಡಬೇಕು. ಸಂಜೆ ಸೂರ್ಯ ಮುಳುಗುವುದನ್ನು ಪ್ರದೋಶಕ ಕಾಲ ಎಂದು ಕರೆಯುತ್ತೇವೆ.
ಸೋಮವಾರ ಮಧ್ಯಾಹ್ನ 3 ಗಂಟೆಯತನಕ ಅಮಾವಾಸ್ಯೆ ಇರುತ್ತದೆ. ಬಲಿ ಪಾಡ್ಯಮಿಯನ್ನು ಮಂಗಳವಾರ ಮಾಡುವಂಥದ್ದು. ನಂತರ ಬಲೀಂದ್ರ ಪೂಜೆ ಮಾಡಬೇಕು. ವಿಶೇಷವಾಗಿ ಬಲಿ ಚಕ್ರವರ್ತಿ ಅಂದು ಭೂಮಿಗೆ ಬಂದು ಸಂಚಾರ ಮಾಡುತ್ತಾನೆ ಎಂಬ ನಂಬಿಕೆ ಇದೆ. ವಿಷ್ಣುದೇವ ವಾಮನ ರೂಪದಲ್ಲಿ ಬಂದು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳತ್ತಾನೆ. ಸುತಳದಲ್ಲಿ ಇರುವ ರಾಕ್ಷಸರು, ಪ್ರೇತಗಳು ಯಾರಿಗೂ ತೊಂದರೆ ಕೊಡದಂತೆ ಆಳುತ್ತಿರುವುದು ಬಲಿ ಚಕ್ರವರ್ತಿ. ಇದರಿಂದ ಬೆಳಿಗ್ಗೆ ಗೋ ಪೂಜೆ ಮಾಡಿ ಸಂಜೆ ಬಲಿ ಚಕ್ರವರ್ತಿಯನ್ನು ಪೂಜಿಸುತ್ತಾರೆ. ಶನಿವಾರವೇ ನೀರು ತುಂಬುವ ಹಬ್ಬವನ್ನು ಮಾಡಬೇಕು. ಆದೇ ನೀರಿನಿಂದ ನರಕ ಚರ್ತುದಶಿಯಂದು ಅಭ್ಯಂಗ ಸ್ಥಾನ ಮಾಡಬೇಕು.