ಕರ್ನಾಟಕ

karnataka

ETV Bharat / state

ಪ್ರತಿಭಟನೆಗೆ ಮಣಿದು ವಿಐಎಸ್ಎಲ್​​ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ - ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ

ದೇಶದ ಹೆಮ್ಮೆಯ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಮಿಕ ಸಂಘಟನೆಯ ಪ್ರತಿಭಟನೆ ನಂತರ ವಿಐಎಸ್ಎಲ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ.

ಸ್ವಾತಂತ್ರ್ಯ ದಿನಾಚರಣೆ

By

Published : Aug 15, 2019, 5:04 PM IST

ಶಿವಮೊಗ್ಗ:ಇಂದು ದೇಶಾದ್ಯಂತ 73ನೇ ಸ್ವಾತಂತ್ರೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಮಾತ್ರ ಸ್ವಾತಂತ್ರ್ಯ ದಿನಾಚರಣೆಗಾಗಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು.

ಕಾರ್ಖಾನೆ ವತಿಯಿಂದ ಪ್ರತಿ ವರ್ಷ ವಿಐಎಸ್ಎಲ್​ನ ಮೈದಾನದಲ್ಲಿ ಅದ್ದೂರಿಯಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿರುವುದರಿಂದ ಕಾರ್ಮಿಕರು ಈ ಕುರಿತು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಅಧಿಕಾರಿ ವರ್ಗ ಕಾರ್ಮಿಕರನ್ನು ದೂರವಿಟ್ಟು, ಕಾರ್ಖಾನೆಯ ಒಳಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಇದರಿಂದ ಆಕ್ರೋಶಗೊಂಡಿರುವ ಕಾರ್ಮಿಕರು, ಕಾರ್ಯಪಾಲಕ ನಿರ್ದೇಶಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ‌ ಎಲ್.‌ಪ್ರವೀಣ್ ಕುಮಾರ್ ಮನೆ ಮುಂದೆ ಧರಣಿ ನಡೆಸಿದರು.

ವಿಐಎಸ್ಎಲ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ಕೆ.ಸಂಗಮೇಶ್ ಆಗಮಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಕಾರ್ಮಿಕರ ಧರಣಿ ಹಾಗೂ ಶಾಸಕರ ಮಾತುಕತೆಯಿಂದ VISL ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಮೈದಾನದಲ್ಲಿ ಆಚರಿಸಿದರು.

ABOUT THE AUTHOR

...view details