ಕರ್ನಾಟಕ

karnataka

ETV Bharat / state

ಪ್ರಣಾಳಿಕೆ ಬಿಡುಗಡೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ - Shimogga

ಸಾಮಾನ್ಯ ವ್ಯಕ್ತಿಯೂ ಕೂಡ ಜನಪ್ರತಿನಿಧಿಯಾಗಿ ಜನರ ಸೇವೆ ಸಲ್ಲಿಸಲು ಸಾಧ್ಯವಿದೆ ಎಂಬುದನ್ನು ಸಾಕ್ಷೀಕರಿಸಲು ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಬೇಕು. ಭ್ರಷ್ಟಾಚಾರ, ಜಾತಿವಾದ, ಕೋಮುವಾದ ಹಾಗೂ ಹಣ-ಹೆಂಡ, ಸೀರೆ ಹಂಚಿದವರಿಗೆ ಮತ ಹಾಕಬಾರದು ಎಂದು ಪಕ್ಷೇತರ ಅಭ್ಯರ್ಥಿ ವಿನಯ್ ಕೆಸಿ ರಾಜಾವತ್ ಮನವಿ ಮಾಡಿದರು.

ವಿನಯ್ ರಾಜಾವತ್

By

Published : Apr 19, 2019, 5:40 AM IST

ಶಿವಮೊಗ್ಗ: ನಾಡಿನ ಭವಿಷ್ಯಕ್ಕಾಗಿ ಹಲವಾರು ಜನಪರ ಕಾರ್ಯಕ್ರಮಗಳ ಬಗ್ಗೆ ಚಿಂತನೆ ಹೊಂದಿರುವ ನನಗೆ ಬೆಂಬಲಿಸಿ ಎಂದು ಪಕ್ಷೇತರ ಅಭ್ಯರ್ಥಿ ವಿನಯ್ ಕೆಸಿ ರಾಜಾವತ್ ಹೇಳಿದ್ದಾರೆ.

ವಿನಯ್ ರಾಜಾವತ್

ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ರೈತರಿಗಾಗಿ ಫಾರ್ಮರ್ ಕ್ಯಾಂಟೀನ್, ಮಹಿಳಾ ಸುರಕ್ಷತೆಗಾಗಿ ಮೈ ಕಾರ್ಡ್ ಐಡೆಂಟಿಟಿ ಯೋಜನೆ, ಪ್ರತಿ ಹಳ್ಳಿಗೂ ಮೂಲಸೌಕರ್ಯ, ಆಹಾರ ಆರೋಗ್ಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಕಲೆಗೆ ಹೆಚ್ಚಿನ ಆದ್ಯತೆ, ಹಸಿರೀಕರಣ ಕಾರ್ಯಕ್ರಮಗಳು ಉದ್ಯೋಗ ಹಾಗೂ ಆರ್ಥಿಕ ಭದ್ರತೆ ನೀರು, ರಸ್ತೆ, ವಿದ್ಯುತ್ ಒದಗಿಸುವುದು ಹೀಗೆ ಅನೇಕ ಯೋಜನೆಗಳು ತಮ್ಮ ಚಿಂತನೆಗಳಾಗಿವೆ. ಹಾಗಾಗಿ ತಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಸಾಮಾನ್ಯ ವ್ಯಕ್ತಿಯೂ ಕೂಡ ಜನಪ್ರತಿನಿಧಿಯಾಗಿ ಜನರ ಸೇವೆ ಸಲ್ಲಿಸಲು ಸಾಧ್ಯವಿದೆ ಎಂಬುದನ್ನು ಸಾಕ್ಷೀಕರಿಸಲು ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಬೇಕು. ಭ್ರಷ್ಟಾಚಾರ, ಜಾತಿವಾದ, ಕೋಮುವಾದ ಹಾಗೂ ಹಣ-ಹೆಂಡ, ಸೀರೆ ಹಂಚಿದವರಿಗೆ ಮತ ಹಾಕಬಾರದು. ಮತದಾರರು ಪ್ರಾಮಾಣಿಕ ಹಾಗೂ ಸಮಾಜಮುಖಿ ಅಭ್ಯರ್ಥಿಯಾದ ನನಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.

For All Latest Updates

TAGGED:

Shimogga

ABOUT THE AUTHOR

...view details