ಶಿವಮೊಗ್ಗ:ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಜಿಲ್ಲಾ ಮೆಗ್ಗಾನ್ ಬೋಧನಾಸ್ಪತ್ರೆಯ ಆವರಣದಲ್ಲಿ ಜನೌಷಧ ಕೇಂದ್ರವಿದ್ದು, ಪ್ರಾರಂಭವಾಗಿ ನಾಲ್ಕು ವರ್ಷಗಳಾಗಿವೆ. ಈ ಕೇಂದ್ರ ಬಡವರ ಪಾಲಿಕೆ ವರದಾನವಾಗಿದೆ.
ಪ್ರಸಿದ್ಧ ಔಷಧ ಕಂಪನಿಗಳು ತಮ್ಮ ಔಷಧ ಮಾರಾಟಕ್ಕೆ ಹಲವು ದಾರಿ ಹಿಡಿಯುತ್ತಿದ್ದು, ಬೇರೆ ಕಂಪನಿಗಳ ಔಷಧಗಳ ದರಕ್ಕಿಂತ ಜನೌಷಧ ಕೇಂದ್ರದಲ್ಲಿ ಶೇ. 20-80ರಷ್ಟು ಕಡಿಮೆ ದರದಲ್ಲಿ ಔಷಧ ದೊರೆಯುತ್ತದೆ. ಜೆನರಿಕ್ ಔಷಧ ಕೇಂದ್ರಗಳ ಔಷಧಗಳಿಗೆ ಆರಂಭದಲ್ಲಿ ಇವು ಗುಣಮಟ್ಟ ಹೊಂದಿವೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು. ಅಲ್ಲದೆ, ಊಹಾಪೋಹಗಳು ಇದ್ದವು. ಕೊರೊನಾ ನಂತರ ಅದಕ್ಕೆಲ್ಲಾ ತೆರೆ ಬಿದ್ದಿದೆ.
ಇದನ್ನೂ ಓದಿ...ಸಂಕ್ರಾಂತಿಯ ನಂತರ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಇರಲ್ಲ : ಬೇಳೂರು ಗೋಪಾಲಕೃಷ್ಣ
ಕೋವಿಡ್ ಅವಧಿಯಲ್ಲಿ ಕಡಿಮೆ ದರಕ್ಕೆ ಮತ್ತು ಗುಣಮಟ್ಟದ ಔಷಧ ಲಭ್ಯವಾದ ಕಾರಣ ಈ ಔಷಧ ಮೇಲೆ ವಿಶ್ವಾಸ ಹೆಚ್ಚಾಯಿತು. ಅಲ್ಲದೆ, ಬೇಡಿಕೆಯೂ ದುಪ್ಪಟ್ಟಾಯಿತು ಎನ್ನುತ್ತಾರೆ ಜನೌಷಧ ಕೇಂದ್ರದ ಉಸ್ತುವಾರಿ ಮೀರ್ ವಸಿಉಲ್ ರೆಹಮಾನ್. ಕಡಿಮೆ ದರಕ್ಕೆ ಔಷಧ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಜೆನರಿಕ್ ಔಷಧದ ಕುರಿತು ಅಭಿಪ್ರಾಯ ಜಿಲ್ಲೆಯಲ್ಲಿ ಮೆಡಿಕಲ್ ಮಾಫಿಯಾ ನಡೆಯುತ್ತಿದೆ ಎಂಬ ಮಾತುಗಳು ಜೋರಿವೆ. ಖಾಸಗಿ ವೈದ್ಯರ ಮಾತಿಗೆ ಕಟ್ಟು ಬಿದ್ದು ಎಷ್ಟೋ ಮಂದಿ ದುಬಾರಿ ಔಷಧಗಳ ಮೊರೆ ಹೋಗುತ್ತಿದ್ದಾರೆ. ಕೋವಿಡ್ನಿಂದಾಗಿ ಸಣ್ಣ ಪ್ರಮಾಣದಲ್ಲಿದ್ದ ಮೆಡಿಕಲ್ ಮಾಫಿಯಾ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದೇ ಅದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.